Thursday, December 3, 2020

spice King

 ಸುಕ್ಕುಗಟ್ಟಿ ಚರ್ಮ , ಬಿಳಿ ಮೀಸೆ, ಬಿಳಿ ಕೂದಲು ಸಂಪೂರ್ಣ ಮುಚ್ಚಿದ ಉತ್ತರಭಾರತದ ಪೇಟದ ಜೊತೆ ಗೂರಲು ಧ್ವನಿಯ ಅಜ್ಜ ಮಸಾಲೆ ಒಂದರ ಜಾಹಿರಾತಿನಲ್ಲಿ ಪ್ರತಿದಿನ ಒಂದಲ್ಲ ಒಂದು ಚಾಲನ್ ನಲ್ಲಿ ಬರುತ್ತಾರೆ.


ಇಷ್ಟು ವಯಸ್ಸಿನ ಅಜ್ಜನಿಗೇನು ಜಾಹಿರಾತಿನ ಗೀಳು ಎಂದವರೇ ಹೆಚ್ಚು... ಆದರೂ ಆ ಅಜ್ಜನಲ್ಲಿ ಉತ್ಸಾಹ ನೋಡಿದರೆ ಯುವಕರಿಗೂ ನಾಚಿಕೆಯಾಗದೆ ಇರದು.


ಅಷ್ಟಕ್ಕು ಆ ಅಜ್ಜ ಯಾರೆಂದು ಹುಡುಕಿದರೆ ಅವರೆ ಮಹಾಶಯ ಧರ್ಮಪಾಲ ಗುಲಾಟಿ ಎಂದು ಎಂದೂ ಬತ್ತದ ಉತ್ಸಾಹಿ ಅಜ್ಜ ಜಗತ್ ಪ್ರಸಿದ್ಧ MDH ಮಸಾಲೆ ಕಂಪನಿಯ ಮಾಲಿಕ.



ಹೌದು ಚಿಕ್ಕ ವಯಸ್ಸಿನಲ್ಲೆ ಓದಿಗೆ ತೀಲಾಂಜಲಿ ಬಿಟ್ಟು ಅಪ್ಪ ಸ್ಥಾಪಿಸಿದ್ದ ಮಸಾಲೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದ ಹುಡುಗ. ಭಾರತದ ಸ್ವಾತಂತ್ರ್ಯ ನಂತರ ತನ್ನ ಸ್ವಂತ ದೇಶ ಪಾಕಿಸ್ತಾನವನ್ನು ಬಿಟ್ಟು ಭಾರತದ ನಿರಾಶ್ರಿತರ ಶಿಬಿರದಲ್ಲಿ ಇದ್ದ ಕುಟುಂಬ... ಮತ್ತೆ ಮಸಲೆ ವ್ಯಾಪಾರ ಭಾರತದ ದಿಲ್ಲಿಯಲ್ಲಿ ಶುರು ಮಾಡಿದರು.


ಉತ್ಸಾಹಿ ಯುವಕ ಅಪ್ಪನನ್ನು ಮೀರಿ MDH (ಮಹಶಿಯಾನ್ ಡಿ ಹಟ್ಟಿ) ಎಂಬ ಮಸಾಲೆ ಬ್ರಾಂಡ್ ನೊಂದಿಗೆ ಒಂದು ಬೃಹತ್ ಫ್ಯಾಕ್ಟರಿ ಆರಂಭಿಸಿದರು ಗುಲಾಟಿ.


MDH ಭಾರತದ ಮನೆಗಳಲ್ಲಿ ಉಪಯೋಗಿಸುವ ಬಹುತೇಕ ಎಲ್ಲಾ ತರಹದ ಸಸ್ಯಹಾರಿ ಮತ್ತು ಮಾಂಸಾಹಾರಿ ಮಸಾಲೆ ಪುಡಿಗಳ ಸಾಮ್ರಾಜ್ಯ ಸ್ಥಾಪಿಸಿದರು ಒಟ್ಟು 420 ಕೋಟಿ ಲಾಕ್ಡೌನ್ ನಡುವೆಯೂ ಲಾಭ ಈ ವರ್ಷ ಗಳಿಸಿ. ಭಾರತದ ಎರಡನೆ ಅತಿದೊಡ್ಡ ಮಸಾಲೆ ಪುಡಿಗಳ ವ್ಯಾಪಾರ ಮಾಡುವ ಕಂಪನಿಯಾಗಿದೆ.



ಈ ಅಜ್ಜ ಕಂಪನಿಯ CEO ಆಗಿ ಕಾರ್ಯ ನಿರ್ವಹಿಸುವ ಅತಿ ಹೆಚ್ಚು ಸಂಬಳ ಪಡೆಯುವ ಭಾರತದ CEO. ಅಜ್ಜ ನೆಂದ ಮಾತ್ರಕ್ಕೆ ಮನೆಯಲ್ಲಿ ಕುಳಿತು ಸಂಬಳ ಪಡೆದವರಲ್ಲ. ಬೆಳಿಗ್ಗೆಯೇ ಎದ್ದು ರೆಡಿಯಾಗಿ ತಾನು ಕಟ್ಟಿದ ಫ್ಯಾಕ್ಟರಿ ಕಾರ್ಯವನ್ನು ಸ್ವತಃ ನಡೆದು ಕುದ್ದು ಪರಿಶೀಲಿಸುತ್ತಿದ್ದರು.


98ನೇ ವಯಸ್ಸಿನಲೂ ಎಲ್ಲರೂ ನಾಚುವಂತಿದ್ದ ಮಹಾಶಯಜೀ ಇಂದು ಬೆಳಿಗ್ಗೆ ನಿಧನರಾದರು. ಅವರ ಸಾಧನೆ ಗಮನಿಸಿ ಭಾರತ ಸರ್ಕಾರ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿತ್ತು.


ನಮ್ಮ ಮನೆಗಳ ಅಡುಗೆ ರುಚಿ ಹೆಚ್ಚಿಸಿದ ಅಜ್ಜನಿಗೆ ಶ್ರದ್ಧಾಂಜಲಿ ಸಲ್ಲಿಸೋಣ😭😭😭.


***ಮೋಂ ಪಿ***


______________________________________________

English Translation..

Wrinkled leather, white mustache, white hair with a full-bodied turban covered in grandiose masala advertisements come in a channel every day.


 Adolescence at this age is more of an advertising craze ... though the enthusiasm of the grandfather is not ashamed of the youth.


 Jagat, a keen grandfather who never knew that grandfather was Mahashay Dharmapala Gulati, is the owner of the famous MDH seasoning company.



 Yes, the boy who was helping him in the spice business that Dad left from an early age.  After the independence of India, the family who left their home country, Pakistan, in the refugee camp of India ... started the spice business again in Delhi.


 Gulati started out with a spicy brand called MDH (Mahashiyan de Hatti), beyond enthusiastic young Dad.


 MDH has established an empire of almost all kinds of herbal and non-vegetable spices used in India's households, making a profit this year despite a total of 420 crore lockdowns.  It is the second largest spice powder company in India.



 This grandfather is the highest paid Indian CEO who serves as the CEO of the company.  Grandpa is not the only one who can make a living at home  He got up early in the morning and checked out his own factory work.


 Mahashyajee, who had been ashamed of all by the age of 98, died this morning.  The Government of India honored him with the Padma Bhushan in recognition of his achievements.


 Shraddhanjali pays tribute to Grandpa who has enhanced the cooking taste of our homes ”.


 *** Mon P ***

CarZ part -3

  ಆಂತರಿಕ ದಹನಕಾರಿ ಎಂಜಿನ್ ಬಹುಶಃ ಹೀಗೆಂದರೆ ಅರ್ಥೈಸಿಕೊಳ್ಳಲು ಕಷ್ಟವಾಗಬಹುದು. internal combustion engine ಎಂಬ ಆಂಗ್ಲ ಪದವನ್ನು  ತಾಂತ್ರಿಕವಾಗಿ ಬಳಸಲಾಗುತ್ತ...