Saturday, November 21, 2020

Indian war army- part 2 INA

 

ಭಾರತೀಯ ಸೇನೆಯ ಇತಿಹಾಸ ಭಾರತದ ಸ್ವತಂತ್ರ ಸಂಗ್ರಾಮ ದಿನಗಳಿಂದಲೆ ಶುರುವಾಗುತ್ತದೆ ಅದರಲ್ಲೂ ರೋಚಕ ಅತಿರೋಮಾಂಚಕ ಇತಿಹಾಸವೆಂದರೆ ಹೆಸರು ಕೇಳಿದೊಡನೆ ಮೈ ಮನಗಳು  ಆ ವ್ಯಕ್ತಿಯಿಂದ ಅವರೆ ನೇತಾಜಿ ಸುಭಾಷ್ ಚಂದ್ರ ಭೋಸ್. ನೀವು ರಕ್ತ ಕೊಡಿ ನಾನು ನಿಮಗೆ ಸ್ವತಂತ್ರ್ಯ ಕೊಡಿಸುತ್ತೇನೆ ಎಂದು ಘರ್ಜಿಸಿ   ಬ್ರಿಟಿಷರ ವಿರುದ್ಧ ಗುಡುಗಿ ಬ್ರಿಟಿಷ್ ರಾಜ್ ವಿರುದ್ಧ ಸೇನೆ ಕಟ್ಟಿ ಸಿಡಿದೆದ್ದು ಯುದ್ಧ ಮಾಡಿದ ಸುಭಾಷ್ ಚಂದ್ರ ಬೋಸ್. ಬ್ರಿಟಿಷರ  ವಿರುದ್ಧವೇ ಭಾರತದ ಸೇನಾ ಶಕ್ತಿ ಬ್ರಿಟಿಷ್ ರಿಗೆ ತೋರಿಸಿ ಭಾರತ ಸ್ವತಂತ್ರ್ಯ ಸಂಗ್ರಾಮದ ಮೊದಲ ದೇಶಿ ಪಡೆ ಕಟ್ಟಿದ ಸೈನ್ಯದ ಹೆಸರೆ ಇಂಡಿಯನ್ ನ್ಯಾಶನಲ್ ಆರ್ಮಿ.



ಮೊದಲಿಗೆ ಗಾಂದಿಜೀರವರ ಅಹಿಂಸಾ ತತ್ವದ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ನಂತರ ಗಾಂಧೀಜಿಯೊಂದಿಗಿನ ವೈಮನಸಿನಿಂದ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಗೆ ರಾಜಿನಾಮೆ ನೀಡಿ ಹೊರ ಬಂದರು...

ಬ್ರಿಟಿಷರ ಕುತಂತ್ರದಿಂದ ಕಾರಾಗೃಹಕ್ಕೆ ತಳ್ಳಲ್ಪಟ್ಟ ನೇತಾಜಿ ಕಾರಾಗೃಹದಿಂದಲೇ ತಪ್ಪಿಕೊಂಡು ನೇರೆ ಸೋವಿಯತ್ ಸಂಯುಕ್ತ ಸಂಸ್ಥಾನಕ್ಕೆ ಪಾಲಾಯನ ಮಾಡಿದರು.
ಸೋವಿಯತ್ ಸಂಸ್ಥಾನದ ನಾಯಕರೊಂದಿಗೆ ಮಾತುಕತೆ ನಂತರ ಅವರ ಪ್ರಯಾಣ ಜರ್ಮನಿಯ ಕಡೆ, ಅದು ವಿಶ್ವದ  ಅತಿ ಕೋಪಿಷ್ಟ ಹಿಟ್ಲರ್ ನೊಂದಿಗೆ ಮಾತುಕತೆಗಾಗಿ ಬಹುಶಃ ಅವರ ಕಥೆ ಮುಗಿಯಿತು ಎಂದೆ ಭಾವಿಸಿದವರಿಗೆ INA ಸ್ಥಾಪನೆ ಮೂಲಕ ಬ್ರಿಟಿಷರಿಗೆ ಶಾಕ್ ನೀಡಿದ್ದರು ನೇತಾಜಿ.


ದಕ್ಷಿಣ ಏಷ್ಯಾ ದೇಶಗಳನ್ನು ಸುತ್ತಿ ಭಾರತದಲ್ಲಿನ ಬ್ರಿಟಿಷ್ ರಾಜ್ ಅನ್ನು ಕಿತ್ತೋಗೆದು ಆಜಾದ್ ಹಿಂದ್ ಅಂದರೆ ಸ್ವತಂತ್ರ ಭಾರತ ನಿರ್ಮಾಣಕ್ಕೆ ಭಾರತ ವಿರುದ್ಧವೆ ಅಂದರೆ ಕಂಪನಿ ಸರ್ಕಾರದ ವಿರುದ್ಧ INDIAN NATIONAL ARMY (ಆಜಾದ್ ಹಿಂದ್ ಪೌಜ಼್ )ಅನ್ನು 1942 ತಮ್ಮ ನೇತೃತ್ವದಲ್ಲಿ ಸ್ಥಾಪಿಸಿದರು ಅದರ ಮೊದಲ ಕಮಾಂಡರ್ ರನ್ನಾಗಿ ಮೋಹನ್ ಸಿಂಗ್ ರವರನ್ನು ನೇಮಿಸಲಾಯಿತು.

ಇಂಡಿಯನ್ ನ್ಯಾಶನಲ್ ಆರ್ಮಿಗೆ ಸೈನಿಕರನ್ನು ಸೋವಿಯತ್ , ಜಪಾನ್, ಜರ್ಮನಿ , ಮಲಾಯಾ(ಮಲೇಷಿಯಾ)ದಲ್ಲಿ ಯುದ್ಧ ಖೈದಿಗಳಾಗಿ ಸೆರೆ ಸಿಕ್ಕ ಸೈನಿಕರನ್ನು ಬಿಡುಗಡೆಗೊಳಿಸಿದ ಮಂದಿ ಮತ್ತು ಭಾರತ ದೇಶದ ಹಲವಾರು ನವ ಉತ್ಸಾಹಿ ಯುವಕರನ್ನು ಸೇರಿಸಿಕೊಂಡರು. ಇದರ ವಿಶೇಷವೆಂದರೆ ಯಾರು ಆಲೋಚನೆ ಮಾಡ ಮಹಿಳಾ ಸಬಲೀಕರಣದ ಹೆಜ್ಜೆ . ಇಂಡಿಯನ್ ನ್ಯಾಶನಲ್ ಆರ್ಮಿಯಲ್ಲಿ ಮಹಿಳಾ ದಳವನ್ನು ಕ್ರಾಂತಿಕಾರಕವಾಗಿ ನೇಮಕ ಮಾಡಲಾಯಿತು ಅದರ ಹೆಸರು ಝಾನ್ಸಿ ರಾಣಿ ರೆಜಿಮೆಂಟ್ ಅದರ ಮುಂದಾಳತ್ವವನ್ನು ಕ್ಯಾಪ್ಟನ್ ಲಕ್ಷ್ಮಿ ಸೆಹೆಗಲ್ ರವರು ವಹಿಸಿದ್ದರು 1943ರ ಎರಡನೆ ವಿಶ್ವ ಯುದ್ಧದಲ್ಲಿ.

ಮೊದಲಿಗೆ ಇಂಡಿಯನ್ ನ್ಯಾಶನಲ್ ಆರ್ಮಿಗೆ ಸೇರಿದ ಸೈನಿಕರ ಸಂಖ್ಯೆ 20000 ಇತ್ತಾದರೂ. 1943ರ ನೇತಾಜಿ ಕಮಾಂಡರ್ ಆದಾಕ್ಷಣ ಈ ಸಂಖ್ಯೆ 5500-60000 ತಲುಪಿತ್ತು, 1000 ಸಂಖ್ಯೆಯ ಝಾನ್ಸಿ ರಾಣಿ ರೆಜಿಮೆಂಟ್ ಸೇರಿ. ಇಂಡಿಯನ್ ನ್ಯಾಶನಲ್ ಆರ್ಮಿ ಕಾರ್ಯಸ್ಥಾನ ಮಲಾಯಾದ ರಂಗೂನ್ ಮತ್ತು ಜಪಾನ್ ಆಕ್ರಮಿತ ಸಿಂಗಾಪುರವಾಗಿತ್ತು.

ಇಂಡಿಯನ್ ನ್ಯಾಶನಲ್ ಆರ್ಮಿಯು ಸಕ್ರಿಯವಾಗಿ ಮೊದಲ ವಿಶ್ವ ಯುದ್ಧ ಹಾಗೂ ಎರಡನೇ ವಿಶ್ವ ಯುದ್ದದಲ್ಲಿ  ಭಾಗವಹಿಸಿತ್ತು. ಎರಡನೇ ವಿಶ್ವ ಯುದ್ಧವನ್ನು ಇಂಡಿಯನ್ ನ್ಯಾಶನಲ್ ಆರ್ಮಿಯ ನೇತಾಜಿ ನೇತೃತ್ವದ ಆಜಾದ್ ಹಿಂದ್ ನ ಹಂಗಾಮಿ ಸರ್ಕಾರ ಘೋಷಣೆ ಮಾಡಿತ್ತು ಕುತಂತ್ರಿ ಬ್ರಿಟಿಷರ ವಿರುದ್ಧ. ಆಜಾದ್ ಹಿಂದ್ ನ ಮೊದಲ ಪ್ರಧಾನಮಂತ್ರಿ ನೇತಾಜಿರವರೆ ಯುದ್ಧ ಘೋಷಣೆಯನ್ನು ಸರ್ಕಾರದ ಕೇಂದ್ರ ಸ್ಥಾನ ಸಿಂಗಾಪುರದ ತಮ್ಮದೆ ಆಜಾದ್ ಹಿಂದ್ ರೇಡಿಯೋ ಮೂಲಕವೇ ಘೋಷಿಸಿದ್ದರು.

ಭಾರತದ ಬ್ರಿಟಿಷ್ ರಾಜ್ ವಿರುದ್ಧ ಇಂಡಿಯನ್ ನ್ಯಾಶನಲ್ ಆರ್ಮಿ ನೆಡೆಸಿದ ಯುದ್ಧದಲ್ಲಿ ಭಾಗವಹಿಸಿದ್ದ ಮಂದಿ ಹಲವಾರು ಮಂದಿ ಸೈನಿಕರು ಭಾರತೀಯರೆ ಹಾಗೂ ಬ್ರಿಟಿಷ್ ಇಂಡಿಯನ್ ಆರ್ಮಿಯ  ಬಹುತೇಕ  ಮಂದಿ ಸೈನಿಕರು ಕೂಡ ಭಾರತೀಯರೆ. ಇದೊಂದು ವಿಚಿತ್ರ ಸನ್ನಿವೇಶವಾದರೂ ಬ್ರಿಟಿಷ್ ಇಂಡಿಯನ್ ಆರ್ಮಿ ಪರ ಯುದ್ಧದಲ್ಲಿ ಭಾಗವಾಹಿಸಿದ ಭಾರತೀಯರು ಬ್ರಿಟಿಷರ ನಿಷ್ಠೆಗೆಗಷ್ಟೆ ಸೀಮಿತವಾದರೆ ಇಂಡಿಯನ್ ನ್ಯಾಶನಲ್ ಆರ್ಮಿ ಪರ ನಿಂತು ಹೋರಾಟ ಮಾಡಿದ ಯೋಧರು ದೇಶದ ಸ್ವತಂತ್ರ್ಯಕ್ಕಾಗಿ ಹೋರಾಟ ಮಾಡಿ ಮಡಿದರು... ಅದರಲ್ಲಿ ಕೆಲವರು ಸೆರೆಸಿಕ್ಕರು. ಆದರೆ ಜಪಾನ್ ಸಿಂಗಾಪುರ ಬ್ರಿಟಿಷ್ ಸೇನೆಗೆ ಶರಣಾಗತಿಯಾದ ವೇಳೆಗೆ ಸುಭಾಷ್ ಕೂಡ ಇದುವರೆಗೂ ಭೇದಿಸಲಾಗದಂತೆ ಕಣ್ಮರೆಯಾಗುತ್ತಲ್ಲೆ ಹಲವಾರು ಮಂದಿ ಪಲಾಯನ ಮಾಡಿದರು.

ಹೀಗೆ ಪಲಾಯನ ಮಾಡಿದ ಇಂಡಿಯನ್ ನ್ಯಾಶನಲ್ ಆರ್ಮಿಯ ಸೇನಿಕರು ಬ್ರಿಟಿಷ್ ಇಂಡಿಯನ್ ಆರ್ಮಿ ಸೇರಿ ಬ್ರಿಟಿಷ್ ಸೇನೆಯಲ್ಲೆ ಅಲ್ಲೋಲ ಕಲ್ಲೋಲ ಮಾಡಿ ಬ್ರಿಟಿಷ್ ಇಂಡಿಯನ್ ಆರ್ಮಿಯ ಸೈನಿಕರಲ್ಲು ದೇಶಭಕ್ತಿ ಉಕ್ಕಿಸಿ ಸರ್ಕಾರದ ವಿರುದ್ಧವೆ ಸೆಟೆದು ನಿಲ್ಲುವಂತೆ ಮಾಡಿ ಸ್ವತಂತ್ರ್ಯಕ್ಕೂ ಮುನ್ನುಡಿ ಬರೆದರು ಹಾಗಾಗಿಯೇ ಇದುವರೆಗೂ ನೇತಾಜಿ ಮರಣಿಸಿಲ್ಲವೆಂದೆ ನಂಬಲಾಗಿದೆ ಏಕೆಂದರೆ ಇಡಿ ಬ್ರಿಟಿಷ್ ಸರ್ಕಾರವನ್ನೆ ಸೈನ್ಯದ ಮೂಲಕ ಅಸ್ಥಿರಗೊಳಿಸಲು ಬೇರಾರಿಂದಲೂ ಸಾದ್ಯವಿಲ್ಲ.

ಭಾರತದ ಸ್ವತಂತ್ರ್ಯಕ್ಕಾಗಿ ಒಂದು ತೊಟ್ಟು ರಕ್ತ ಹರಿಸಿಲ್ಲವೆಂದು ಹೇಳುವ ಸತ್ಯ... ಇಂಡಿಯನ್ ನ್ಯಾಶನಲ್ ಆರ್ಮಿ ಕಥೆ ಕೇಳಿದಾಗ ಸುಳ್ಳು ಎನ್ನಿಸದೆ. ಇಂಡಿಯನ್ ನ್ಯಾಶನಲ್ ಆರ್ಮಿಯನ್ನು ನೇತಾಜಿ ಸ್ಥಾಪನೆ ಮಾಡದಿದ್ದರೆ ಬಹುಶಃ ಈಗಲೂ ನಾವು ಬ್ರಿಟಿಷರ ಗುಲಾಮಗಿರಿಯಲ್ಲೆ ಇರಬೇಕಿತ್ತೇನೊ...! ಆದರೆ ಭಾರತಕ್ಕೆ ಸ್ವತಂತ್ರ್ಯ ಮರಳಿಸಿದ ನೇತಾಜಿ ರವರ ಇಂಡಿಯನ್ ನ್ಯಾಶನಲ್ ಆರ್ಮಿ ಈಗಲೂ ನೇತಾಜಿ ಹೇಳಿದಂತೆ ಇಂದಿನವರೆಗೂ ಭಾರತೀಯ ಸೇನೆಯಲ್ಲಿ ಭಾರತಕ್ಕಾಗಿ ಇಂಡಿಯನ್ ನ್ಯಾಶನಲ್ ಆರ್ಮಿ ರೆಜಿಮೆಂಟ್ ರಕ್ತ ನೀಡಿ ದೇಶ ಸೇವೆ ಮಾಡುತ್ತಿದೆ.

ನಮಗೂ ಇಂತಹ ರಕ್ತ ನೀಡುವ ಅವಕಾಶ ಸಿಗಲಿ ಎಂದು ನೇತಾಜಿ ನೆನೆಸುತ್ತಾ ದೇವರಲ್ಲಿ ಕೇಳೋಣ.

**********💐ಜೈ ಭಾರತ್💐*********
**********💐ಜೈ ಜವಾನ್💐*********

***ಮೋಂ ಪಿ***

___________________________________________________________________________________

English Translation...

The history of the Indian Army dates back to the days of the Indian Independence War, and the most thrilling history is that when the name is heard, Nethaji s Schandra Bose his famous words "Give your blood and I will give independence" motivated lakhs of youths those days. The Indian National Army is the name of the army that built the first indigenous army of the Indian War of Independence.


Earlier, Netaji Subhash Chandra Bose, the national president of the Indian National Congress on the principle of nonviolence, resigned from Gandhi's confrontation with the Indian National Congress.

Netaji was thrown into prison by the British cunning and escaped from prison and fled to the Soviet Union.

 After his talks with Soviet leaders, his journey to Germany, to talk to the world's most angry Hitler, was perhaps a shock to the British through the INA establishment.


In 1942, Mohan Singh was appointed as the first Commander in Chief of the Indian government against the Azad Hind, an independent India, which formed the British Raj in India.

He recruited soldiers to the Indian National Army who was released as prisoners of war in the Soviet Union, Japan, Germany, and Malaya (Malaysia) and recruited several young Indian youths. What makes it special is the empowerment step of women who think. In the Indian National Army, the Women's Regiment was commissioned as a revolutionary by the name of the Jhansi Rani Regiment commanded by Captain Lakshmi Senegal in the Second World War of 1943.

Initially, the Indian National Army numbered 20000. The 1943 Netaji Commander's launch reached 5500-60000, including the 1000 Jhansi Rani Regiment. The Indian National Army base was Rangoon in Malaya,and the Japanese occupied Singapore.

The Indian National Army was actively involved in World War I and World War II. World War II was declared by the Provisional Government of Azad Hind led by Netaji of the Indian National Army against the British. The first Prime Minister of Azad Hind, Netajiraj, declared war on the government's headquarters in Singapore via his own Azad Hind Radio.

Many of the soldiers who fought in the Indian National Army's war against the British Raj in India are Indians and most of the soldiers of the British Indian Army are Indians. Although this is a strange situation, the Indians who participated in the British Indian Army's war were limited to the loyalty of the British. But when Japan surrendered to Singapore's British army, Subhash too fled the hitherto insurmountable disappearance.

Soldiers of the Indian National Army joined the British Indian Army and rebelled in the British Army, and the soldiers of the British Indian Army poured patriotism against the government.

The fact that India's independence is not a bloodbath ... The Indian National Army's story is untrue. If Netaji did not establish the Indian National Army, we would still be in British slavery! However, Netaji's Indian National Army, which restored its independence to India, still maintains that the Indian National Army regiment is serving blood in India in the Indian Army.

May God give us such blood and let Netaji ask God in prayer.

********** 💐jai Bharat 💐 *********

 ********** 💐jai jawan💐 *********


 *** Mon P ***


No comments:

Post a Comment

CarZ part -3

  ಆಂತರಿಕ ದಹನಕಾರಿ ಎಂಜಿನ್ ಬಹುಶಃ ಹೀಗೆಂದರೆ ಅರ್ಥೈಸಿಕೊಳ್ಳಲು ಕಷ್ಟವಾಗಬಹುದು. internal combustion engine ಎಂಬ ಆಂಗ್ಲ ಪದವನ್ನು  ತಾಂತ್ರಿಕವಾಗಿ ಬಳಸಲಾಗುತ್ತ...