Saturday, November 21, 2020

Indian war army - part 3

 

ಇಂದಿನ ಭಾರತೀಯ ಸೇನೆಯ ಇತಿಹಾಸ ಸುಭಾಷ್ ಚಂದ್ರ ಬೋಸ್ ಕಟ್ಟಿದ ಇಂಡಿಯನ್ ನ್ಯಾಶನಲ್ ಆರ್ಮಿಗಿಂತಲೂ ಹಿಂದಿನದ್ದು. ಆದರೆ ಅದರ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಹಿಸಿಕೊಂಡು ನಡೆಸುತ್ತಿದ್ದು ಭಾರತಕ್ಕೆ  ಕಳ್ಳರಂತೆ ಬಂದು ಇಲ್ಲೆ ನೆಲೆಗೊಂಡ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯಿಂದ.


ಕೇವಲ ತಮ್ಮ ವ್ಯಾಪಾರ , ವ್ಯವಹಾರ ವ್ಯಾಪ್ತಿಯಲ್ಲಿನ ಕಾಲೋನಿಗಳ ಸುರಕ್ಷತೆ ಮತ್ತು ವಿಸ್ತಾರಕ್ಕಾಗಿ ಮಾತ್ರ ಬ್ರಿಟಿಷ್ ಆರ್ಮಿಯನ್ನು 1774ಯಲ್ಲಿ ಕಟ್ಟಲಾಯಿತು ಬಹುತೇಕ ಬ್ರಿಟಿಷ್ ಬಲದ ಸೈನ್ಯವದು. ಅದು ಭಾರತದ ಮೂರು ಪ್ರಮುಖ ವ್ಯಾಪಾರ ನೆಲೆಗಳನ್ನು ಕೇಂದ್ರವಾಗಿಸಿಕೊಂಡು ಸ್ಥಾಪನೆಯಾಗಿದ್ದವು. ಆ ಮೂರು ನೆಲೆಗಳು ಬಂಗಾಳ, ಬಾಂಬೆ ಮತ್ತು ಮದರಾಸು. ಅವರ ಆದ್ಯತೆ ಈ ಮೂರು ಕೇಂದ್ರವಾಗಿಸಿ ತಮ್ಮ ವ್ಯಾಪಾರ ವ್ಯವಸ್ಥೆಯನ್ನು, ಇತರೆ ಪ್ರಬಲ ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬ್ರಿಟಿಷ್ ರಾಜ್ ಅನ್ನು ವಿಸ್ತರಿಸಿ ಆಡಳಿತ ನಡೆಸುವುದೆ ಆಗಿತ್ತು.

ಬ್ರಿಟಿಷ್ ರಾಜ್ಯ ವಿಸ್ತರಣೆಗೆ ಮೊದಲಿಗೆ ಹೆದರಿಸಿ ಬೆದರಿಸಿ ಸಂಘಟಿತ ಸೈನ್ಯವಿಲ್ಲದ ರಾಜ್ಯಗಳನ್ನು ಪಡೆದು ಸೇರಿಸಿಕೊಳ್ಳುವುದು. ಸಂಘಟಿತ ಸೈನ್ಯ ಹೊಂದಿದ ರಾಜ್ಯಗಳೊಂದಿಗೆ ಇದೆ ಸೈನ್ಯಬಲದಿಂದ ಪ್ರಭಾವ ಬಳಸಿ ಆಥವಾ ಯುದ್ಧ ನಡೆಸಿ ಗೆದ್ದು ತನ್ನ ಬ್ರಿಟಿಷ್ ರಾಜ್ಯಕ್ಕೆ ಸೇರಿಸಿಕೊಳ್ಳುವುದಾಗಿತ್ತು

ಕಾರಣ ಅಂದು ಭಾರತದಲ್ಲಿದ್ದ ಸಂಘಟಿತವಲ್ಲದ ವಂಶವಾಹಿ ಆಡಳಿತ ವ್ಯವಸ್ಥೆಯಿಂದ. ಭಾರತದಲ್ಲಿ ನೂರಾರು ಅಂದರೆ 700ಕ್ಕೂ ಅಧಿಕ ಸಂಸ್ಥಾನಗಳು ಹೋಳು ಹೋಳಾಗಿ ಆಡಳಿತ ನಡೆಸುತ್ತಿದ್ದವು. ಇದನ್ನು ಸದುಪಯೋಗ ಮಾಡಿಕೊಂಡ ಬ್ರಿಟಿಷರು ತಮ್ಮ ಆಡಳಿತಾತ್ಮಕ ಸೈನ್ಯಕ್ಕೆ ಭಾರತೀಯ ಪ್ರಜೆಗಳನ್ನು ಸಹ ಸೇರಿಸಿಕೊಂಡು ಬಲಿಷ್ಠ ಸೈನ್ಯವನ್ನಾಗಿಸಿತ್ತು. 

ಅಂತಹ ಸೈನ್ಯವನ್ನು ಬಂಗಾಳ ಸೇನೆ - ಬಂಗಾಳ ಪ್ರಾಂತ್ಯಕ್ಕೆ, ಬಾಂಬೆ ಸೇನೆ - ಬಾಂಬೆ ಪ್ರಾಂತ್ಯಕ್ಕೆ, ಮದರಾಸು ಸೇನೆ - ಮದರಾಸು ಪ್ರಾಂತ್ಯಕ್ಕೆ. ಈ ಸೇನೆ ಸೇರಿಸಿಕೊಳ್ಳಲು ಯಾವುದೆ ಮಾನದಂಡಗಳನ್ನು ಮಾಡದೆ ಕೇವಲ ತಮ್ಮ ಪ್ಯಾಂತ್ಯದಲ್ಲಿನ ಸ್ಥಳೀಯ ಕ್ಷೇತ್ರಗಳ ಸ್ಥಳೀಯ ಯುವಕರನ್ನಷ್ಟೆ ಸೇರಿಸಿಕೊಳ್ಳಲಾಯಿತು ಆ ಮೂರು ಸೇನೆಗಳ ನೇತೃತ್ವ ಕಮಾಂಡರ್ ಇನ್ ಚೀಫ್ ರವರಿಂದ ಮಾತ್ರ ನಡೆಯಲ್ಪಟ್ಟಿತ್ತು.

ತಮ್ಮ ರಾಜ್ಯ ವಿಸ್ತರಣೆ ಹೆಚ್ಚಾದಂತೆಲ್ಲ ಆಡಳಿತ ಸುಧಾರಣೆ ಕಾರ್ಯ ಕೈಗೊಂಡು ತಮ್ಮ ಬ್ರಿಟಿಷ್ ಸೇನೆಯ ಸಮವಸ್ತ್ರ ಸಹಿತ ತರಬೇತಿಗೆ ವ್ಯವಸ್ಥೆ ಮಾಡಲಾಯಿತು. ಈ ವ್ಯವಸ್ಥೆ ಯನ್ನು 1748ರಲ್ಲಿ ಮೇಜರ್ ಜನರಲ್ ಸ್ಟ್ರಿನ್ಜರ್ ಲಾರೆನ್ಸ್ ಸೈನ್ಯಕ್ಕೆ ಅಳವಡಿಸಿದರು ಆದ್ದರಿಂದಲೇ ಅವರನ್ನು ಭಾರತೀಯ ಸೇನಾ ಪಿತಾಮಹ ಎಂದು ಕರೆಯಲಾಗಿದೆ.

1757 ರಲ್ಲಿ ಈ ರೀತಿಯ ಭಾರತೀಯ ಸೈನ್ಯ ವ್ಯವಸ್ಥೆಯನ್ನು ಮೊದಲಿಗೆ ಬಂಗಾಳ ಸೇನೆಯಲ್ಲಿ ಅಳವಡಿಸಿಕೊಂಡು ನಂತರ 1759ರಲ್ಲಿ ಮದರಾಸು ಸೇನೆ ಮತ್ತು 1767ರಲ್ಲಿ ಬಾಂಬೆ ಸೇನೆಗೂ ವಿಸ್ತರಣೆ ಮಾಡಲಾಯಿತು. ಇದಕ್ಕೆ ಹೊಸ ಸೇರ್ಪಡೆ ಎಂದರೆ ಮುಖ್ಯ ಆಡಳಿತ ವ್ಯವಸ್ಥೆ ಬ್ರಿಟಿಷರೊಂದಿಗೆ ಭಾರತೀಯ ಸೈನಿಕರಿಗೂ ಅಧಿಕಾರ ನೀಡಲಾಯಿತು ಸಿಪಾಯಿ ಎಂಬ ಅಧಿಕಾರ ಪದನಾಮದೊಂದಿಗೆ.

ನಂತರದ ದಿನಗಳಲ್ಲಿ ಬ್ರಿಟಿಷರ ರಾಜ್ಯ ವಿಸ್ತರಣೆಯಾದಂತೆಲ್ಲ ಅದೆ ಮೂರು ಕೇಂದ್ರ ಸ್ಥಾನವಾಗಿಸಿಕೊಂಡು ಸೇನಾ ರೆಜಿಮೆಂಟ್ / ತುಕಡಿಗಳನ್ನು ಸಿಪಾಯಿಗಳ ಅಡಿಯಲ್ಲಿ ಸಿದ್ದಪಡಿಸಿದರು. ಅದರಲ್ಲಿ ಮೈಸೂರು ರೆಜಿಮೆಂಟ್ , ಪಂಜಾಬಿ ರೆಜಿಮೆಂಟ್ , ಪಂಜಾಬಿ ಮುಸ್ಲಿಂ ರೆಜಿಮೆಂಟ್ , ಬಂಗಾಳ ರೆಜಿಮೆಂಟ್ , ಬಲೂಚೀ ರೆಜಿಮೆಂಟ್ , ಅಫ್ಘಾನ್ ರೆಜಿಮೆಂಟ್  ಮತ್ತು ಮೊದಲಾದವು.

ಇದೆ ರೆಜಿಮೆಂಟ್ ಗಳನ್ನು ಬಳಿಸಿಕೊಂಡು ನಮ್ಮ ವಂಶವಾಹಿ ಸ್ಥಳೀಯ ರಾಜ್ಯಾಡಳಿತಗಳ ವಿರುದ್ಧ ಯುದ್ದ ಮಾಡುತ್ತಾ ನಮ್ಮವರಿಂದಲೆ ನಮ್ಮವರನ್ನು ಸದೆಬಡಿದು ರಾಜರನ್ನು ತೆರಿಗೆ / ಕಪ್ಪ ನೀಡಿ ಆಡಳಿತ ನಡೆಸಲು ಆಥವಾ ಸಂಪೂರ್ಣ ರಾಜ್ಯ ಆಡಳಿತ ಬಿಡುವುವಂತೆ ನೋಡಿಕೊಂಡು ತಮ್ಮ ಕಂಪನಿ ನಡೆಸಿತು ಕುತಂತ್ರಿ ಬ್ರಿಟಿಷರ ಆಡಳಿತ. ಇದರಲ್ಲಿ ನಮ್ಮ ರಾಜರ ಒಡಕುಗಳೆ ಕಾರಣವೆಂದರೂ ಸಣ್ಣ ಮಾತೆ ಆದರೆ ಇದು ಕಟು ಸತ್ಯ.

ಬ್ರಿಟಿಷರು ನಮ್ಮ ಸಿಪಾಯಿಗಳನ್ನೆ ಬಳಸಿಕೊಂಡು ಅಂದರೆ 1824-1844ರ ವರೆಗೆ ಬರೋಬ್ಬರಿ 170 ಸಿಪಾಯಿಗಳನ್ನು ಹೊಂದಿದ ಸೇನೆಯಲ್ಲಿ 15000 ಯುರೋಪ್ ಸೈನಿಕರಿದ್ದರೆ ಸ್ಥಳಿಯ ಭಾರತೀಯರದ್ದೆ ಪಾರಮ್ಯ ಭಾರತೀಯ ಸಂಖ್ಯೆ ಇದರಲ್ಲಿ 2 ಲಕ್ಷಕ್ಕು ಮಿಗಿಲಾದ ಸೇನಾ ಸಂಖ್ಯೆ. ಭಾರತೀಯ ಬಾಹುಳ್ಯ ಸೇನೆ ಸಹಾಯದಿಂದಲೆ ಬ್ರಿಟಿಷರು 

1766-69ರ ಆಂಗ್ಲೊ - ಮೈಸೂರು ಯುದ್ಧ ,
1775-1818ರ ಆಂಗ್ಲೊ - ಮರಾಠಾ ಯುದ್ಧ 
1823- 1886ರ ಆಂಗ್ಲೊ - ಬರ್ಮನ್‌  ಯುದ್ಧ 
1839 - 1881ರ ಆಂಗ್ಲೊ - ಅಫ್ಘಾನ್ ಯುದ್ಧ 
1845- 1849ರ ಆಂಗ್ಲೊ - ಸಿಕ್ ಯುದ್ಧದಗಳನ್ನು ನಡೆಸಿ ಗೆದ್ದಿತ್ತು.

ಆದರೆ ಬ್ರಿಟಿಷರಿಗೆ ಸೆಡ್ಡು ಹೊಡಿದಿದ್ದೆ ತಮ್ಮ ಸೇನಾ ಆಡಳಿತ ಸುಧಾರಣೆ ಕ್ರಮವಾದ ಸಿಪಾಯಿ ಹುದ್ದೆ .

ಅದು 1857 ಬ್ರಿಟಿಷ್ ಸೇನೆ ಮೇಲಿನ ಯುದ್ಧ ವಿಜಯಗಳ ಅಮಲಿನಲ್ಲಿದ್ದ ಕ್ಷಣ. ಒಬ್ಬ ಮಂಗಲ್ ಪಾಂಡೆ ಎಂಬ ಸಿಪಾಯಿ ಬೆಂಕಿ ಉಂಡೆಯೊಂದು ಬ್ರಿಟಿಷ್ ಸೇನೆ ಮೇಲೆ ಅಪ್ಪಳಿಸಿತು. ಅದರ ಉರಿಗೆ ತರತರ ನಡುಗಿದ ಬ್ರಿಟಿಷ್ ಆಡಳಿತ ಅದನ್ನು ಸಮಯದ ಮೊದಲೇ ಅಂದರೆ ವರ್ಷ ಪೂರ ಯುದ್ಧ ಮಾಡಿ ಹೈರಾಣಗಾಗಿ ಆರಿಸಿತ್ತಾದರೂ ಅದರಿಂದ ಭಾರತ, ಭಾರತದ ಸೈನ್ಯ ವ್ಯವಸ್ಥೆ  ಮತ್ತು ಭಾರತದಲ್ಲಿನ ತಮ್ಮ ಆಡಳಿತದಲ್ಲಿ ಬಹುಮುಖ್ಯ ಬದಲಾವಣೆಯನ್ನೆ ಮಾಡಬೇಕಾಯಿತು ಎಂದರೆ ಭಾರತೀಯರ ಕೆಚ್ಚೆದೆಯ ಸಾಟಿ ಭಾರತೀಯರೆ ಅಲ್ಲವೆ.

ಮುಂದುವರೆಯುವುದು...

                                                                                                                                                                                                                                                                                                     ***ಮೋಂ ಪಿ***

************ನಿರೀಕ್ಷಿಸಿ**********

ಮುಂದಿನ ಭಾಗದಲ್ಲಿ...
* ಸಿಪಾಯಿ ದಂಗೆ/ ಪ್ರಥಮ ಸ್ವತಂತ್ರ್ಯ ಸಂಗ್ರಾಮ ಮತ್ತು ಪರಿಣಾಮ.

**********💐ಜೈ ಭಾರತ್💐**********
**********💐ಜೈ ಜವಾನ್💐**********

__________________________________________________________________________________

English Translation...

 The history of the present Indian Army dates back to the Indian National Army built by Subhash Chandra Bose. But its administration was completely taken over by the British East India Company, which came to India as thieves.

The British Army was built in 1774 solely for the safety and breadth of their trade and business colony. It was founded and centered on three of India's major trading centers. Those three settlements were Bengal, Bombay, and Madras. His preference was to expand and govern the British Raj, which had taken these three centers and embraced their trading system and other powerful states.

Incorporating states without organized armies that initially threatened the expansion of the British state. The use of force by the armed forces or the war with the incorporated states was to be annexed to its British state.

Because of the unorganized gene administration system in India. Hundreds of India, over 700 States, have been ruled by a slate. The British took advantage of this and added Indian citizens to their administrative army and made it a powerful army.

Such an army is to the Bengal Army - Bengal Province, Bombay Army - Bombay Province, Madras Army - Madras Province. The army was made up of the commander-in-chief of the three armies, who were enlisted in the local constituencies of their respective pantheon without any criteria.

The expansion of their state did not improve the administration's reforms and provided for the uniform training of the British Army. This system was incorporated by Major General Stringer Lawrence into the army in 1748 and is thus called the Father of the Indian Army.

In 1757, the Indian Army was first incorporated into the Bengal Army and later expanded to the Madras Army in 1759 and the Bombay Army in 1767. A new addition to this was that the main administrative system was empowered by the British with Indian soldiers under the designation of Sepoy.

Later, the British state was not expanded, but the three regiments became the center of the army regiment. These include Mysore Regiment, Punjabi Regiment, Punjabi Muslim Regiment, Bengal Regiment, Baluchi Regiment, Afghan Regiment, and so on.

Using the regiments, our war was fought against the local constitutional regimes of ours, and our own company was run by the cunning British to rule over us by giving them tax or black money. The reason for this is the fact that our kings split because of small talk.

The British used our troops, which ranged from 1824-1844, with 170 soldiers, with 15000 Europeans. The British, with the help of the Indian Army

 Anglo-Mysore War of 1766-69,

 The Anglo - Maratha War of 1775-1818

 The Anglo-Burman War of 1823-1886

 1839 - 1881 Anglo-Afghan War

 Won the Anglo - Sikh Wars of 1845-1849.

But the British had been miserable in their military administration reform.

 That was the moment when the 1857 British Army was in the throes of war victories. A Mangal Pandey sepoy fire has struck the British army. The British administration, with its unabashed trepidation, opted for hierarchy ahead of time, but it had to undergo major changes in India, India's military system, and their governance in India, not the brave Indians of India.

Proceeding ...

                                                                                                                                        *** Mon P ***

 ************ Wait **********

In the next section ...

 * Sepoy Mutiny / First War of Independence

********** 💐jai Bharat 💐 **********

 ********** 💐jai jawan💐 **********


No comments:

Post a Comment

CarZ part -3

  ಆಂತರಿಕ ದಹನಕಾರಿ ಎಂಜಿನ್ ಬಹುಶಃ ಹೀಗೆಂದರೆ ಅರ್ಥೈಸಿಕೊಳ್ಳಲು ಕಷ್ಟವಾಗಬಹುದು. internal combustion engine ಎಂಬ ಆಂಗ್ಲ ಪದವನ್ನು  ತಾಂತ್ರಿಕವಾಗಿ ಬಳಸಲಾಗುತ್ತ...