Saturday, November 21, 2020

Indian war army - part 4

 

ಭಾರತೀಯ ಬ್ರಿಟಿಷ್ ಸೇನೆ ಭಾರತದಲ್ಲಿ ತನ್ನ ಶಾಸನವನ್ನು ತನ್ನ ಸೇನೆ ಮೂಲಕ ಪ್ರಬಲವಾಗಿ ಬಳಸಿ ಎಲ್ಲಾ ರಾಜರನ್ನು  ಮಣಿಸುತ್ತಾ ಒಂದೊಂದಾಗಿ ತನ್ನ ಹಿಡಿತಕ್ಕೆ ಸೇರಿಸಿಕೊಳ್ಳತೊಡಗಿತ್ತು. ಅದಕ್ಕಾಗಿ ತನ್ನ ಸೇನೆಯ ಮೂಲಕ ಹಲವಾರು ರಾಜರನ್ನು ಮಣಿಸಿ ಸಂಸ್ಥಾನಗಳನ್ನು ವಶಪಡಿಸಿಕೊಂಡು ವಿರೋಧವೇ ಇಲ್ಲದೆ ಸಾಗಿತ್ತು.

ಈ ಕಂಪನಿ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಉಂಡೆಯೊಂದು ಅಪ್ಪಳಿಸಿತು. ಅದರ ಹೆಸರೆ ಸಿಪಾಯಿ ದಂಗೆ ತನ್ನ ಸೇನೆ ಬಲಗೊಳಿಸಲು ಭಾರತೀಯರಿಗೂ ಅಧಿಕಾರ ನೀಡಿದ್ದ ಸಿಪಾಯಿಯ ಹುದ್ದೆಯೇ ಅವರಿಗೆ ಕಂಟಕವಾಗಿ ಪರಿಣಮಿಸಿತು.

ಈಸ್ಟ್ ಇಂಡಿಯಾ ಕಂಪನಿ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕರಿಗೆ ಹೊಸ ಮಾದರಿಯ ಎನ್ಫೀಲ್ಡ್ ರೈಫಲ್ ನ ಗುಂಡುಗಳ ಪ್ಯಾಕೆಟ್ ಮೇಲೆ ಗೋ ಮತ್ತು ಹಂದಿ ಕೊಬ್ಬಿನ ಲೇಪನ ಮಾಡಲಾಗಿದೆ ಎಂಬ ಗುಮಾನಿ ಮೇಲೆ ಬ್ರಿಟಿಷ್ ಸೇನಾಧಿಕಾರಿ ಮೇಲೆ 29 ಮಾರ್ಚ್ 1857 ರಲ್ಲಿ ಬ್ರಿಟಿಷ್ ಸೇನೆಯ ಸಿಪಾಯಿ ಆಗಿದ್ದ ಮಂಗಲ್ ಪಾಂಡೆ ನೇತೃತ್ವದಲ್ಲಿ ಹಲ್ಲೆ ನಡೆಸಲಾಯಿತು.


ಅದನ್ನು ಪ್ರಶ್ನಿ ಹೋದ ಉಳಿದ ಬ್ರಿಟಿಷ್ ಸೇನೆಯ ಅಧಿಕಾರಿಗಳ ಮೇಲೆ ಹೆದರದೆ ವಿರೋಧಿಸಿದ ಮಂಗಲ್ ಪಾಂಡೆಯನ್ನು ಹರ ಸಾಹಸ ಪಟ್ಟು ಸೇನೆ ಬಂದಿಸಿತು. ಮಂಗಲ್ ಪಾಂಡೆ ಬಂಧನವು ಕಾಡಕಿಚ್ಚಿನಂತೆ ಹಬ್ಬಿ ಬ್ರಿಟಿಷ್ ಸೇನೆಯ ವಿರುದ್ಧ ಇಡಿಯ ಸೇನೆಯೇ ಭಾರತೀಯ ಸಿಪಾಯಿಗಳ ವಿರುದ್ಧ ಹೋರಾಟಕ್ಕೆ ನಿಂತಿತು.  ಈ ಹೋರಾಟ ಸ್ವತಂತ್ರ್ಯ ಹೋರಾಟದ ರೂಪ ಪಡೆದು ಬ್ರಿಟಿಷ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿತಲ್ಲದೆ ಉಳಿದ ರಾಜ್ಯಗಳ ರಾಜ ಮನೆತನವಗಳನ್ನು ಕೆರಳಿಸಿತು. ಅಲ್ಲಿ ವರೆಗೂ 1600 ಇಸವಿಯಲ್ಲೆ ಬಂದು ಸರ್ಕಾರವನ್ನೆ ರಚಿಸಿದ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಯುದ್ಧ ಮಾಡಿ ಭಾರತ ಮಾತೆಯನ್ನು 200 ವರ್ಷಗಳ ಕಾಲ ಬ್ರಿಟಿಷರ ಜೀತಕ್ಕೆ ತಳ್ಳಿ ತಮ್ಮ ಅರಮನೆಗಳಲ್ಲಿ ಬೆಚ್ಚಗಿನ ಮಂಚದ ಮೇಲೆ ವಿರಾಜಮಾನರಾದ ರಾಜರುಗಳನ್ನು ಕೂಡ ಬಡಿದು ಎಬ್ಬಿಸಿತು.

ಈ ಸ್ವತಂತ್ರ್ಯ ಹೋರಾಟದ ಕಾಡ್ಗಿಚ್ಚುನ್ನು ಅರಿತ ಬ್ರಿಟಿಷ್  ಸರ್ಕಾರ ಮಂಗಲ್ ಪಾಂಡೆಗೆ 18 april 1857 ರಂದು ನಿಗದಿ ಪಡಿಸಿದ ನೇಣು ಸಿಕ್ಷೆಯನ್ನು ಹತ್ತು ದಿನ ಮುನ್ನವೇ ಅಂದರೆ 8 april 1857ರಂದೆ ನೇಣಿ ಶಿಕ್ಷೆಗೆ ಗುರಿ ಪಡಿಸಿತು.

ಇದೆ ಸಾಕಾಗಿತ್ತು ಪ್ರಥಮ ಭಾರತೀಯ ಸ್ವತಂತ್ರ್ಯ ಸಂಗ್ರಾಮ ಪ್ರಾರಂಭವಾಗಲು. ಮಂಗಲ್ ಪಾಂಡೆ ಒಂದು ಬೆಂಕಿ ಚೆಂಡೆಂದು. ಸ್ವತಂತ್ರ್ಯ ಸಂಗ್ರಾಮದ ಮೊದಲ ಬಲಿದಾನವೇ ಮಂಗಲ್ ಪಾಂಡೆ ತಮ್ಮ 29ನೇ ವಯಸ್ಸಿಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದನೆಂದು ಇತಿಹಾಸದ ಪುಟ ಸೇರಿದರೆ ನಿರಂತರ ಸುಖದ ಸುಪ್ತಿಗೆ ಮೇಲೆ ದೇಶವೆಂದರೆ ಕೇವಲ ತನ್ನ ರಾಜ್ಯ, ರಾಜ್ಯವೆಂದರೆ ರಾಜ್ಯ ತಾನೆ ದೇಶದ ಅದಿಪತಿ ಎಂದು ಮಲಗಿದ್ದ ರಾಜರನ್ನು ಆ ಒಂದು ಬಿಲಿದಾನ ಬಡಿದೆಬ್ಬಿಸಿತು.

ಭಾರತ ಮಾತೆ ಎಂದರೆ ತಾನು ಹುಟ್ಟಿದ ಪಾವನ ಪುಣ್ಯ ಭರತ ಭೂಮಿಯೇ ಎಂದರಿಯದ ರಾಜರೂ ಸಹ ಬ್ರಿಟಿಷ್  ಸರ್ಕಾರದ ವಿರುದ್ಧ ನಿಂತು ಹೋರಾಡಲು ನಿಂತರು. ಈ ಅಚಾನಕ್ ಯುದ್ಧಗಳಿಂದ ಕಂಗೆಟ್ಟು ಬ್ರಿಟಿಷ್ ಸರ್ಕಾರ ಹೈರಾಣಗಿಹೋಯಿತು.
ವರ್ಷಗಳ ಕಾಲ ಸತತವಾಗಿ ಹೋರಾಟ ಮಾಡಬೇಕಾದ ಒತ್ತಡ ನಿರ್ಮಾಣವಾಗಿತು. ಈ ಹೋರಾಟದಲ್ಲಿ ಹಲವಾರು ರಾಜರು ೬ ಲಕ್ಷಕ್ಕೂ ಹೆಚ್ಚು ಮಂದಿ ಮಡಿದರು.

ಈ ದಂಗೆ ಕೇವಲ ಡಾಲ್ಹೌಸಿಯ ಹೊಸ ನೀತಿ ಕಾನೂನುಗಳ ಜಾರಿಯಿಂದ ಕಂಗೆಟ್ಟು ರಾಜರುಗಳು ತಮ್ಮ ಅಧಿಕಾರ ಉಳಿಸಿಕೊಳ್ಳಲು ಮಾಡಿದ ವಿಫಲ ಹೋರಾಟದ ಸಣ್ಣ ದಂಗೆಯಷ್ಟೆ ಎಂದೆ ಬ್ರಿಟಿಷರರು ಸಾರಿದರೆ. ವೀರ ಸಾವರ್ಕರ್ ರವರು ತಮ್ಮ ಕೃತಿ 1857ರ ಪ್ರಥಮ ಸ್ವತಂತ್ರ್ಯ ಸಂಗ್ರಾಮ ಎಂದು ಝಾನ್ಸಿ ರಾಣಿಯ ವೀರಾಗ್ನಿಯ ಹೋರಾಟದ ಸಹಿತ ಹಲವಾರು ರಾಜರುಗಳ ಹೋರಾಟವನ್ನು ಬಣಿಸಿ ದೇಶಕ್ಕೆಲ್ಲ ದೇಶಭಕ್ತಿಯ ಸುಧೆ ಉಣಿಸಿದರು.

ಈ ಸಂಗ್ರಾಮ ಭಾರತದಲ್ಲಿನ ಬುಡವನ್ನೆ ಅಲುಗಾಡಿಸಿತು, ಈ ಸಂಗ್ರಾಮದ ದಿಸೆಯಿಂದ ನಮ್ಮ ದೇಶದಲ್ಲಿನ ಈಸ್ಟ್ ಇಂಡಿಯಾ ಕಂಪನಿ ಸರ್ಕಾರವನ್ನು ವಿಸರ್ಜಿಸಿ ನೇರೆ ಬ್ರಿಟನ್ ಕಿರೀಟದ ಅದೀನದ ಸರ್ಕಾರವನ್ನು ಭಾರತದಲ್ಲಿ ಸ್ಥಾಪಿಸಲಾಯಿತು.

ಹರಿಯಾಣ ,ಬಿಹಾರ , ಝಾನ್ಸಿ , ನವಾಬರ ಸಂಸ್ಥಾನಗಳು ಸೇರಿದಂತೆ ಪ್ರಮುಖವಾಗಿ ದೆಹಲಿಯ ಮೊಗಲ್ ಸಂಸ್ಥಾನವನ್ನು ಭಾರತದಲ್ಲಿ ಅಂತ್ಯಗೊಳಿಸಿ ಭಾರತದೆಲ್ಲೆಡೆ ಮೂರು ಪ್ರಮುಖ ಕೇಂದ್ರ ಸ್ಥಾನವಾದ ಬಂಗಾಳ,ಬಾಂಬೆ,ಮದರಾಸುವನ್ನು ತನ್ನ ವ್ಯಾಪ್ತಿಯಲ್ಲಿ ಆಡಳಿತ ನಡೆಸಲು ತೀರ್ಮಾನಿಸಲಾಯಿತು ಮತ್ತು ಭಾರತೀಯ ಸೇನೆಯ ಸೇನಾ ನಿರ್ಧಾರಗಳನ್ನು ಸಹ ಬ್ರಿಟನ್ ಸೇನೆಗೆ ಆಡಳಿತಾತ್ಮಕವಾಗಿ ಸೇರಿಸಲಾಯಿತು.

ಸಿಪಾಯಿ ದಂಗೆ ಭಾರತಕ್ಕೆ ಸ್ವತಂತ್ರ್ಯದ ಕಿರೀಟ ತೊಡಿಸಲಿಲ್ಲವಾದರೂ ಎಂದೆಂದಿಗೂ ದೇಶಭಕ್ತಿ ಉಕ್ಕಿಸುವ ಹೋರಾಟವಾಗಿ ಕಣ್ಣು ಮುಂದೆ ತರುತ್ತದೆ. ಎದೆಯಲ್ಲಿ ಇಂದಿಗೂ ಮುಂದಿಗೂ ದೇಶಭಕ್ತಿಯ ಸುಧೆಯನ್ನು ಹರಿಸುತ್ತಲಿರುತ್ತದೆ ಅಲ್ಲವೇ...?

**********💐ಜೈ ಭಾರತ್ 💐**********
**********💐ಜೈ ಜವಾನ್💐**********


***ಮೋಂ ಪಿ***

___________________________________________________________________________________

English Translation...

The Indian British Army used its legislation in India to power itself through its army, consolidating all kings. He defeated many kings through his army and conquered the kingdoms.

The company suddenly burst into flames. The name of the Sepoy Rebellion, which had given the Indians the power to strengthen their army, became a source of great concern.

On March 29, 1857, a British soldier, Mangal Pandey, was assaulted by a British soldier on a gun and pig fat coating on a packet of bullets from a new type of Enfield rifle for soldiers in the East India Company's government.

Mangal Pandey, the army of Grabha, came out against the rest of the British army officers who questioned it. The detention of Mangal Pandey was like a wildfire, with Hubby fighting against the British army and the Indian army fighting the Indian soldiers. This struggle took the form of an independence struggle that provoked the British government's inability to swallow the royal family of the remaining states. In the 1600s, it fought the East India Company, which had formed the government and pushed the Mother of India to the seat of the British for 200 years.

The British government, aware of this wildfire of independence, ordered Mangal Pandey to be hanged on 8 april 1857, ten days before the imposition of the hanging scandal on 18 april 1857.

It was enough to start the first Indian War of Independence. Mangal Pandey as a fire ball. If Mangal Pandey died at the age of 29, it was the first sacrifice of the war of independence.

Even the kings who did not know that India was the land of their birth, stood to fight the British government. These Achanak wars disturbed the British government.

The pressure to fight consistently for years was building. In this struggle, several kings killed over 100,000 people.

If the British were to say that this rebellion was merely a small rebellion by the Dalhousie's new policy laws, the kings' failure to defend their power. Veera Savarkar's patriotism was not in the country, as his work was called the First War of Independence in 1857, in which many kings, including the Jhansi Queen Viragnia, fought.

The war shook the country in India, and the fate of the British government was established in India, following the dissolution of the East India Company government in our country.

It was decided to administer the three major headquarters across India, Bengal, Bombay and Madras, throughout India, including the Haryana, Bihar, Jhansi, and Nawab states, most notably the British Army.

Though the Sepoy Rebellion did not crown India's independence, it always brings to the fore the fight for patriotism. In the chest will continue to be a patriotism to this day.

********** 💐jai Bharat 💐 **********

 ********** 💐jai jawan💐 **********

*** Mon P ***

No comments:

Post a Comment

CarZ part -3

  ಆಂತರಿಕ ದಹನಕಾರಿ ಎಂಜಿನ್ ಬಹುಶಃ ಹೀಗೆಂದರೆ ಅರ್ಥೈಸಿಕೊಳ್ಳಲು ಕಷ್ಟವಾಗಬಹುದು. internal combustion engine ಎಂಬ ಆಂಗ್ಲ ಪದವನ್ನು  ತಾಂತ್ರಿಕವಾಗಿ ಬಳಸಲಾಗುತ್ತ...