Sunday, June 6, 2021

CarZ part -3

 


ಆಂತರಿಕ ದಹನಕಾರಿ ಎಂಜಿನ್ ಬಹುಶಃ ಹೀಗೆಂದರೆ ಅರ್ಥೈಸಿಕೊಳ್ಳಲು ಕಷ್ಟವಾಗಬಹುದು. internal combustion engine ಎಂಬ ಆಂಗ್ಲ ಪದವನ್ನು  ತಾಂತ್ರಿಕವಾಗಿ ಬಳಸಲಾಗುತ್ತದೆ. ಹಿಂದಿನ ಸಂಚಿಕೆಯಲ್ಲಿ ಪ್ರಸ್ತಾಪಿಸಿದ ಬಾಹ್ಯ ದಹನಕಾರಿ ಇಂಜಿನ್ ನ ಮುಂದುವರಿದ ಹಾಗೂ ಹೆಚ್ಚು ಸುಧಾರಿತ ಇಂಜಿನ್ ಗಳೆನ್ನಬಹುದು.

ಬಾಹ್ಯ ದಹನಕಾರಿ ಇಂಜಿನ್ ನಿಂದ ಓಡುತ್ತಿದ್ದ ಕಾರುಗಳು ಅಷ್ಟೇನು ಎಂದರೆ ಕಷ್ಟದಲ್ಲಿ 30-40 ಕಿಮಿ ವೇಗ ಪಡೆಯುತ್ತಿರಲಿಲ್ಲ. ಅದರೆ ನಿರಂತರವಾಗಿ ಸಂಶೋಧನೆ ಫಲವಾಗಿ ಬಾಹ್ಯ ದಹನಕಾರಿ ಇಂಜಿನ್ ಬದಲಿಗೆ ಬಂದ ಇಂಜಿನ್ ನ ಹೆಸರೆ ಆಂತರಿಕ ದಹನಕಾರಿ ಇಂಜಿನ್ ಅಂದರೆ ಬಾಹ್ಯವಾಗಿ ಇಂಧನ ದಹನಕ್ರಿಯೆ ನಡೆಯುತ್ತಿದ್ದ ಇಂಜಿನ್ ಗಳ ಬದಲು ಇಂಜಿನ್ ಒಳಗೆ ದಹನ ಕ್ರಿಯೆ ನಡೆಸಿ ಇಂಧನ ವ್ಯಯವನ್ನು ತಗ್ಗಿಸಿ ವೇಗ ಪಡೆದುಕೊಳ್ಳುವಂತೆ ಈ ರೀತಿಯ ಸಂಶೋಧನೆ ನಡೆಸಲಾಯಿತು.

1791 ರಿಂದಲೇ ಇದರ ಸಂಶೋಧನೆಗಳು ಶುರುವಾದವು ಬಾಹ್ಯ ದಹನಕಾರಿ ಇಂಜಿನ್ ನಲ್ಲಿ ಬಳಸಲಾದ ಘನ ( ಕಲ್ಲಿದ್ದಲು) ರೂಪದ ಇಂಧನದ ಬದಲಿಗೆ ದ್ರವ ರೂಪದ ಇಂಧನ ಬಳಸಬಹುದಾದ ಇಂಜಿನ್ ಇದಾಗಿತ್ತು ಇವುಗಳ ಸುಧಾರಣೆ ನಿರಂತರವಾಗಿ ವಿವಿಧ ದೇಶದ ವಿಜ್ಞಾನಿಗಳಿಂದ ನಡೆಯುತ್ತಾ ಸಾಗಿದವು ಇವುಗಳನ್ನು ಗ್ಯಾಸ್ ಟರ್ಬೈನ್ ಗಳಿಗೆ ಆಳವಡಿಕೆ ಮಾಡಿ ಬಳಸಲಾಯಿತು.

1823ರಲ್ಲಿ electric spark(ಕಿಡಿ) ಇಂದ ದಹನ ಕ್ರಿಯೆ ಇಂದ ನಡೆಯಬಲ್ಲ ಇಂಜಿನ್ ಗಳನ್ನು ಸಂಶೋಧನೆ ಮಾಡಿಲಾಯಿತು. 1872ರಲ್ಲಿ ನಿಕೋಲಸ್ ಒಟ್ಟೊ ಮೊದಲ ಬಾರಿಗೆ ವಾತಾವರಣದ ಗಾಳಿಯಿಂದ ದಹನ ಕ್ರಿಯೆ ಸಹಾಯ ಮಾಡಬಲ್ಲ ಇಂಜಿನ್ ಅನ್ನು ಸಂಶೋಧನೆ ಮಾಡಿ ಪೇಟೆಂಟ್ ಪಡೆದರು. ಈಗಲೂ ಬಹುತೇಕ ಪೆಟ್ರೋಲ್ ಇಂಜಿನ್ ಗಳು ಒಟ್ಟೊ ಸೈಕಲ್ ಇಂಜಿನ್ ನ ಆಧರಿಸಿಯೇ ನಿರ್ಮಿಸಲಾಗುತ್ತದೆ.

ಒಟ್ಟೊ ರವರು 1879ರಲ್ಲಿ ನಾಲ್ಕು ಸ್ಟ್ರೋಕ್ ಎಂಜಿನ್ ಅನ್ನು ಸಂಶೋಧನೆ ಮಾಡಿ ಪೇಟೆಂಟ್ ಪಡೆದರು ಡೈಮ್ಲರ್ ರೊಂದಿಗೆ ಜೊತೆಗೂಡಿ. ನಂತರ ಕಾರ್ಲ್ ಬೆಂಜ್ ರವರು

ಎರಡು ಸ್ಟ್ರೋಕ್ ಇಂಜಿನ್ ಗಳ ಪೇಟೆಂಟ್ ಪಡೆದು 1886ರಲ್ಲಿ ವಾಣಿಜ್ಯ ಬಳಕೆಗೆ ಮೊದಲ ಬಾರಿಗೆ ಪೆಟ್ರೋಲ್  ಇಂಧನದಿಂದ ಎರಡು ಸ್ಟ್ರೋಕ್ ಇಂಜಿನ್  ಚಲಿಸಬಲ್ಲ ಕಾರುಗಳನ್ನು ರಸ್ತೆಗೆ ಇಳಿಸಿದರು ಇದು ಜಗತ್ತಿನ ಮೊದಲ ಕ್ರಾಂತಿಕಾರಿ ವಾಣಿಜ್ಯ ಕಾರು ವಹಿವಾಟಾಗಿತ್ತು.

1892ರಲ್ಲಿ ರುಡಾಲ್ಫ್ ಡೀಸೆಲ್‌ ರವರು ದಹನ ಕ್ರಿಯಲ್ಲಿ ಬಳಕೆ ಮಾಡಬಹುದಾದ ತೈಲ ಒಂದರಿಂದ ನಡೆಯಬಲ್ಲ ಆಂತರಿಕ ದಹನಕಾರಿ ಇಂಜಿನ್ ಅನ್ನು ಕಂಡು ಹಿಡಿದರು. ಆ ಎಣ್ಣೆಯನ್ನು ಈಗಲೂ ಆ ವಿಜ್ಞಾನಿಯ ಹೆಸರಿನಲ್ಲಿರುವ ಡೀಸೆಲ್‌ ಎಂಬ ಹೆಸರಿನಿಂದಲೇ ಕರೆಯುತ್ತೇವೆ ಮತ್ತು ಇಂದಿನ ಎಲ್ಲಾ ಡೀಸೆಲ್‌ ಇಂಜಿನ್ ಗಳು ಡೀಸಲ್ ಸೈಕಲ್ ಸಿದ್ಧಾಂತದ ಮೇಲೆಯೇ ಕಾರ್ಯ ನಿರ್ವಹಿಸುತ್ತವೆ.

ಎಂದು ಆಂತರಿಕ ದಹನಕಾರಿ ಇಂಜಿನ್ ಸಂಶೋಧನೆಗಳು ನಡೆದು ವಾಣಿಜ್ಯವಾಗಿ ಮುನ್ನೆಲೆಗೆ ಬಂದವೊ ಅಂದೆ ಪ್ರಪಂಚದ ದಿಕ್ಕೆ ಬದಲಾವಣೆಯಾಯಿತು. ಹೊಸ ಹೊಸ ಕಂಪನಿಗಳ ತಲೆ ಎತ್ತಲು ತಯಾರಿಕೆ ಮಾಡತೊಡಗಿದರೆ ಆಂತರಿಕ ದಹನಕಾರಿ ಇಂಜಿನ್ ನ ಮೇಲಿನ ಸಂಶೋಧನೆಗಳು ಕ್ರಾಂತಿಕಾರಕವಾಗಿ ನಡೆದು ಇಂದಿನ ವರೆಗೂ ಸುಧಾರಣೆಗೊಳ್ಳುತ್ತಾ ಸಾಗಿವೆ. ಹೊಸ ಹೊಸ ಬಗೆಯ ಇಂಜಿನ್ ಗಳು ಸುಧಾರಣೆಗೊಂಡವು ಆದರೆ ಒಟ್ಟೋ ಮತ್ತು ಡೀಸೆಲ್‌ ಸಿದ್ಧಾಂತ ಮೀರಿಸುವ ಯಾವುದೇ ಇಂಜಿನ್ ಗಳು ಆಟೋಮೊಬೈಲ್  ಕ್ಷೇತ್ರಕ್ಕೆ ಕಾಲಿಡಲಿಲ್ಲ. ಕೇವಲ ಅವುಗಳ ಸುಧಾರಿತ ನವ ಮಾದರಿಗಳು ಬಂದವು.

ಸಂಶೋಧನೆಯಲ್ಲಿ ವ್ಯಾಪಕವಾಗಿ ಬದಲಾವಣೆ ಆಗದ ಕಾರಣ ಪೆಟ್ರೋಲ್ ಮತ್ತು ಡೀಸೆಲ್‌ ಇಂಧನ ಜಾಗತಿಕವಾಗಿ ಇಂದು ಲಭ್ಯತೆ ಇಳಿಕೆ ಕಂಡ ಬಳಿಕ ಪರ್ಯಾಯ ಇಂಧನ ಚಾಲಿತ ವಾಹನಗಳು ಹೊಸ ಆಸೆ ಚಿಗುರಿಸಿವೆ. ಅದರಲ್ಲಿ ವಿದ್ಯುತ್ ಚಾಲಿತ ಹೊಸ ಮಾದರಿಯ ಕಾರುಗಳು, ಬೈಕ್ ಗಳು ಮುಂದೆ ರಸ್ತೆಯಲ್ಲಿ ಕ್ರಾಂತಿ ಸೃಷ್ಟಿಸುವ ಎಲ್ಲಾ ಲಕ್ಷಣಗಳು ಕಂಡಿವೆಯಾದರೂ
ಆಂತರಿಕ ದಹನಕಾರಿ ಇಂಜಿನ್ ನಂತೆ ಬಹುಕಾಲ ನಿಲ್ಲಬಹುದೆ ಎಂಬ ಯಾವುದೆ ಸದ್ಯಕ್ಕೆ ಖಾತ್ರಿ ಇಲ್ಲ.

ಆಂತರಿಕ ದಹನಕಾರಿ ಇಂಜಿನ್ ಸೃಷ್ಟಿಸಿ ಜಗತ್ತಿನಲ್ಲಿ ಮಾನವ ಬೆಳವಣಿಗೆಯ ಸಮಯವನ್ನೆ ವೇಗವಾಗಿ ಬದಲಿಸಿದೆ ಎಂದೆ ಖಂಡಿತವಾಗಿ ತಪ್ಪಾಗಲಾರದು ಇದಕ್ಕೆ ಒಟ್ಟೊ ಮತ್ತು ಡೀಸೆಲ್‌ ಗೆ ನಾವು ಎಂದೂ ಋಣಿಯಾಗಿರಲೇ ಬೇಕು ಅದು ನಮ್ಮ ಕರ್ತವ್ಯ ಕೂಡ.

***ಮೋಂ ಪಿ***


_______________________________________________________________________________

English Translation....



      An internal combustion engine is probably the hardest to understand.  The term internal combustion engine is technically used.  These are the advanced and more advanced engines of the external combustion engine mentioned in the previous issue.

   Cars driven by an external combustion engine were hardly 30-40 km / h.  Instead of an external combustion engine, the name of an internal combustion engine, which is the result of continuous research, this research was carried out to reduce fuel consumption and speed up the engine's internal combustion engine rather than externally combustion engines.

     Its inventions began in 1791 when it was a liquid-fueled engine rather than a solid (coal) fuel used in an external combustion engine. Improvements were constantly being made by scientists from various countries who used gas turbines.

     In 1823, electric engines with combustion by electric spark were invented.  In 1872, Nicholas Otto invented and patented the first combustion engine with atmospheric air.  Most petrol engines are still based on the Otto cycle engine.

    Otto invented and patented the four-stroke engine in 1879 in partnership with Daimler.  Then by Carl Benz

    Two stroke engines were patented in 1886 for the first commercial use of Two-stroke engine -powered cars with petrol fuel for commercial use.

     In 1892, Rudolf Diesel invented an internal combustion engine that could be used for combustion.  That oil is still called the diesel in the name of that scientist, and all today's diesel engines operate on the diesel cycle theory.

    The invention of the internal combustion engine changed the direction of the world commercially.  As new companies begin to make headway, innovations in the internal combustion engine have been revolutionized and improved to the present day.  New types of engines have been improved, but none of the Otto and Diesel theory engines have entered the automobile sector.  Only with their improved new models came.

     Due to the lack of widespread research, alternative fuel-powered vehicles have begun to emerge after the worldwide availability of petrol and diesel fuel.  Although it has all the attributes of a new generation of electric - powered cars and bikes in the road ahead There is currently no guarantee that the internal combustion engine will last as long.

     Of course, it is our duty to owe Otto and Diesel the fact that we have created an internal combustion engine that has rapidly changed the course of human development in the world.

                                                                                                                                        *** Mon P ***



                        

No comments:

Post a Comment

CarZ part -3

  ಆಂತರಿಕ ದಹನಕಾರಿ ಎಂಜಿನ್ ಬಹುಶಃ ಹೀಗೆಂದರೆ ಅರ್ಥೈಸಿಕೊಳ್ಳಲು ಕಷ್ಟವಾಗಬಹುದು. internal combustion engine ಎಂಬ ಆಂಗ್ಲ ಪದವನ್ನು  ತಾಂತ್ರಿಕವಾಗಿ ಬಳಸಲಾಗುತ್ತ...