ಕಾರು ಎಂದೊಡನೆ ಮನ ಮನದಲ್ಲು ಏನೊ ಒಂದು ಉತ್ಸಾಹ ಮನ ಮನೆಗಳಲ್ಲಿ ಮೂಡುತ್ತವೆ ಕಾರಣ ಕಾರಿನಲ್ಲಿ ಮಾಡಬಹುದಾದ ಆರಾಮದಾಯಕ ಪಯಣ ಆಥವಾ ಬೇಗೆ ಗೂಡಿಗೆ ಆಥವಾ ನಿಗದಿತ ಸ್ಥಳಕ್ಕೆ ಹೋಗಿಬಿಡಬಹುದೆಂಬ ಸಂತೋಷಕ್ಕಿರಬಹುದು.
ನೋಡಿದರೆ ಕಣ್ಮನ ಸೆಳೆವ ಕಾರಿನಲ್ಲಿ ಕುರಬೇಕೆಂಬ ಆಸೆಗೂ ಇರಬಹುದು, ಅವುಗಳ ವೇಗಕ್ಕೂ, ಅವುಗಳ ವಿನ್ಯಾಸವು ಇರಬಹುದು.
ಈಗ ಮಾರುಕಟ್ಟೆಯಲ್ಲಿ ನಮ್ಮ ಮನದ ಬಯಕೆಯ ವಿವಿಧ ಯುಟಿಲಿಟಿ ಕಾರುಗಳು ಲಭ್ಯ. ಕಂಪನಿಗಳ ಇಂತಹ ಅನೇಕ ಕಾರುಗಳ ಪೈಪೋಟಿಯಲ್ಲಿ ಜನರು ಮಾರು ಹೋಗುತ್ತಾರೆ.
ಇಂದು ಕಣ್ಣ ಮುಂದೆ ರಸ್ತೆಯಲ್ಲಿ ಸಾಗುವ ಹೊಸ ವಿನ್ಯಾಸದಲ್ಲಿ ಬರುತ್ತಿರುವ ಕಾರುಗಳ ನೋಡಿಯೇ ಸುಸ್ತಾಗುತ್ತಿರುವ ನಾವು ಮುಂದೆ ಬರಲಿರುವ ಹೊಸ ಹೊಸ ಹೈಬ್ರೀಡ್ ಕಾರುಗಳ ಮಾದರಿಗಳು ಇನ್ನೆಷ್ಟು ಕ್ರೇಜ್ ಹುಟ್ಟಿಸಬಹುದು...?
ಇಂದು ಕಾರುಗಳ ಮಾಯಾ ಜಾಲದಲ್ಲಿ ನಾವುಗಳ ಬಿದ್ದಿರಬಹುದು ಆದರೆ ಇವುಗಳ ಜನನ ಮಾತ್ರ ಹೆರಿಗೆ ನೋವಿನಷ್ಟೆ ತ್ರಾಸದಾಯಕವಾಗಿತ್ತು ಸುಖಸುಮ್ಮನೆಯಂತು ರಸ್ತೆಗೆ ಇಳಿದ್ದಿದ್ದಲ್ಲ ಈ ಕಾರುಗಳ ಸಹಿತ ಎಲ್ಲಾ ವಾಹನಗಳು.
ಕಾರಿನ ಹುಟ್ಟಿಗೆ ಕಾರಣ ಹುಡುಕ ಹೋದರೆ ನಾವು ಚೀನಾ ತಲುಪಬೇಕು ಅದು 1672ಕ್ಕೆ ಇದು ಸಂಪೂರ್ಣ ವಾಹನವಾಗಿರದೆ ರಾಜ ಮನೆತನಕ್ಕಾಗಿ ಆಟಿಕೆಯನ್ನು ತಯಾರಿಕೆ ಮಾಡುವ ಸಲುವಾಗಿ ನಿರ್ಮಿಲಾಗಿತ್ತು ಅದರಲ್ಲಿ ಕೇವಲ ಒಬ್ಬ ಚಾಲಕ ಆಥವಾ ಒಬ್ಬ ವ್ಯಕ್ತಿ ಕೂರಲು ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.
ಇದಕ್ಕೆ ಬಳಸಲಾಗಿದ್ದ ಇಂಜಿನ್ ಇಂದಿನ ಮಾದರಿಯ ಇಂಜಿನ್ ಅಲ್ಲ ಬದಲಿಗೆ external combustion engine ಕನ್ನಡದಲ್ಲಿ ಬಾಹ್ಯ ದಹನಕಾರಿ ಇಂಜಿನ್ ಎಂದು ಅದರ ಅರ್ಥ ಇಂಜಿನ್ ಹೊರ ಭಾಗದಲ್ಲಿ ಇಂಧನದ ದಹನ ಕ್ರಿಯೆ ನಡೆಸಿ ದ್ರವವನ್ನು ನೀರಿನ ರೂಪದಿಂದ ಆವಿಯಾಗಿಸಿ ಪಾತ್ರೆಯಂತಹ ತಪ್ಪಲ್ಲಿಯಲ್ಲಿ ಕಾಯಿಸಿ ಬಾಷ್ಪೀಕರಣಗೊಳಿಸಿ ವಾಹನವನ್ನು ಚಲಿಸುವಂತೆ ಮಾಡುವುದು.
ಚೀನಾದಲ್ಲಿ ಇದರ ಬಳಕೆಯ ಬಗ್ಗೆ ಹೆಚ್ಚು ಗಮನಕೊಡದ ಕಾರಣ ಅದರ ಸಂಶೋಧನೆ ಸಂಪೂರ್ಣ ಶ್ರೇಯ ಫ್ರೆಂಚ್ ಸಂಶೋಧಕ ನಿಕೋಲಸ್ ಜೋಸೆಫ್ ರವರಿಗೆ ಇಂದಿಗೂ ನೀಡಲಾಗಿದೆ ಕಾರಣ ಅವರೆ ಮೊದಲ ಬಾರಿಗೆ ಸಂಪೂರ್ಣ ನವೀನ ಮಾದರಿಯ ಮೂರು ಗಾಲಿಯ ಕಾರನ್ನು ರಸ್ತೆಗೆ 1770ರಲ್ಲಿ ತಂದು ಯಶಸ್ವಿಯಾಗಿಸಿದರು ಅದು ಕೂಡ ಬಾಹ್ಯ ದಹನಕಾರಿ ಇಂಜಿನ ಬಳಸಿ ಅದನ್ನು ಅವರು ಬಾಷ್ಪೀಕರಣಗೊಳಿಸಿದ್ದರಿಂದ ಸ್ಟೀಮ್ ಇಂಜಿನ್ ಎಂದು ಕರೆದರು.
ಮೂರು ಗಾಲಿಯ ಎತ್ತಿನ ಬಂಡಿಗೆ ಮಷಿನ್ ಒಂದನ್ನು ಅಳವಡಿಸಿಕೊಂಡಂತೆ ಇದ್ದ ಈ ವಾಹನದಲ್ಲಿನ ಅಸಂತುಲತೆ, ಅಸಮತೋಲನ ಮತ್ತು ವಿನ್ಯಾಸ ದೋಷದ ಕಾರಣ ಫ್ರೇಂಚ್ ಆರ್ಮಿಯ ಈ ಪ್ರಾಜೆಕ್ಟ್ ಅನ್ನು ನಿಲ್ಲಿಸಿ ಉತ್ತಮ ಹಾಗೂ ರೋಚಕ ಸಂಶೋಧನೆಯಷ್ಟೆ ಎಂದು ಫ್ರಾನ್ಸ್ ನ ಮ್ಯೂಸಿಯಂನಲ್ಲಿರಿಸಿ 600ರೂಗಳ ಸಂಶೋಧನಾ ಪಿಂಚಣಿ ನಿಕೋಲಸ್ ರವರಿಗೆ ನೀಡಿ ಗೌರವಿಸಲಾಯಿತು.
ನಿಕೋಲಸ್ ಜೋಸೆಫ್ ರವರ ಸಂಶೋದನೆಯನ್ನೆ 1771 ರಿಂದ 1865ರವರೆಗೂ ಆದರಿಸಿ ಹಲವಾರು ಮಾದರಿಯ ಬಸ್ಸು ,ಕಾರು , ರೈಲುಗಳನ್ನು ರಸ್ತೆಗೆ ಬಂದವು... ಅವುಗಳಲ್ಲಿ ರೈಲುಗಳು ಮಹತ್ವ ಪಡೆದು ಸಾಮಾಜಿಕವಾಗಿ ಬಳಕೆಯಲ್ಲಿದ್ದವು.
ಯಾವುದೇ ಇಂಜಿನ್ ವಾಹನಗಳ ಹೃದಯವಿದ್ದಂತೆ ಅವುಗಳ ಚಲನೆ ಇಲ್ಲದೆ ವಾಹನ ಒಂದಿಷ್ಟು ಮುಂದೆ ಎಂದೂ ಸಾಗದು ಇನ್ನೂ ಬಾಹ್ಯ ದಹನಕಾರಿ ಇಂಜಿನ್ ಮನಕ್ಕೆ ಇಳಿಯದಿದ್ದರೆ ಹಳೆ ಹಿಂದಿ ಸಿನಿಮಾಗಳಲ್ಲಿ ಬರುತ್ತಿದ್ದ ರೈಲನಲ್ಲಿ ನಡೆಸುತ್ತಿದ್ದ ಫೈಟಿಂಗ್ ಸೀನ್ ನೋಡಿದರೆ ಕಾಣುವ ಕಲ್ಲಿದ್ದಲಿನ ಉರಿವ ಒಲೆಯೇ ಬಾಹ್ಯ ದಹನಕಾರಿ ಇಂಜಿನ್ ಅಂದುಕೊಳ್ಳಬಹುದು.
ಭಾರತದಲ್ಲೂ ಬ್ರಿಟಿಷರ ಕಾಲದಿಂದಲೆ ಭಾರತಕ್ಕೆ ಬಾಹ್ಯ ದಹನಕಾರಿ ಇಂಜಿನ್ ಮಾದರಿಯ ರೈಲುಗಳು ಮುಂದಿನ ಮಾದರಿಯ ಡೀಸೆಲ್ ಇಂಜಿನ್ ಗೆ ಬದಲಾವಣೆಯಾಗುವವರೆಗೂ ಬಳಕೆಯಲ್ಲಿದ್ದವು.
ಈ ಕಾರು ಸಂಶೋಧನೆ ಹೂವಿನ ಹಾಸಿಗೆಯಾಗಿಲಿಲ್ಲ ನಿಕೋಲಸ್ ಸಂಶೋಧನೆ ಮಾಡಿ ಪ್ರದರ್ಶನ ನೀಡುವಾಗಲೇ ಮೊದಲ ಆಕ್ಸಿಡೆಂಟ್ ಆಗಿತ್ತು. ಆದ್ದರಿಂದ ಜಾಗರೂಕತೆಯಿಂದ ಕಾರು/ವಾಹನ ಚಲಾಯಿಸಿ ರಸ್ತೆಯಲ್ಲಿ ಸುರಕ್ಷತೆಯಿಂದ ಇರಿ. ಸದಾ ಗಾಡಿ ಓಡಿಸುತ್ತಿರಿ.
ಮುಂದುವರಿಯುವುದು...
***ಮೋಂ ಪಿ***
**********💐 ನಿರೀಕ್ಷಿಸಿ💐**********
ಆಂತರಿಕ ದಹನ ಇಂಜಿನ್ ಗಳ ವಾಹನಗಳು
_______________________________________________________________________________
English Translation...
The excitement of being in a car with a car makes for a fun ride or bay and can be happy.
There may be a desire for a car to disappear, their speed, their design.
Various utility cars are now available in our minds on the market. People are seduced by the competition of many such companies.
Tired of seeing cars coming up in the new design of the road ahead of us today, we can come up with some more new hybrid car models ...?
We may have fallen into the magic of cars today but the birth of these was just as painful as childbirth.
If we can find the cause of the car, we must reach China. It was not a complete vehicle for 1672 but was built to make a toy for the royal family.
External combustion engine in Kannada is an external combustion engine which means that the fuel is extinguished in the outer part of the engine by evaporating the liquid and evaporating the liquid in a container.
The lack of attention to its use in China is attributed to the great French inventor Nicholas Joseph, whose research was still successful today when he brought the first modern three-wheeled car to the road in 1770, which he called the steam engine because of the evaporation of an external combustion engine.
Nicholas was awarded a $ 600 research pension at the Museum of France for stopping the French Army's project because of the imbalance, imbalance and design flaw in the vehicle, which was fitted to a three-wheeled cart.
From the years of 1771 to 1865, a number of buses, cars, and trains were introduced into the road ... Trains were important and socially useful.
If the engine is not at the heart of any engine and the vehicle is not moving at all and the external combustion engine is not in sight, then the fighting scene in the train in the old Hindi cinemas can be seen as the burning of coal.
In India, the British also used external combustion engine trains until they were replaced with the next diesel engine.
The car was not a flower bed. So drive the car / vehicle carefully and stay safe on the road. Always drive.
Proceeding ...
*** Mon P ***
********** 💐 Wait💐 ********** Internal combustion engines


No comments:
Post a Comment