ಕಾರ್ ಕಾರ್ ಕಾರ್ ಎಲ್ ನೋಡಿ ಕಾರ್, ಕಾರಿನ ದರ್ಬಾರ್ ಯೇ ಅಂತಹುದ್ದು ಎತ್ತ ನೋಡಿದರು ಕಾರುಗಳೆ. ರೋಡ್ ನಲ್ಲಿ ನೋಡಿದರು ಕಾರು, ಆಫಿಸ್ ಗಳ ಮುಂದೆ ಕಾರು, ಮನೆ ಮುಂದೆ ಕಾರು, ಮನೆಯ ಗ್ಯಾರೇಜ್ ನಲ್ಲೂ ಕಾರ್ . ಕಾರ್ ನಮ್ಮೊಂದಿಗಿಲ್ಲದಿದ್ದರು ಮುಂದೊಂದು ದಿನ ನಾವು ಒಂದು ಕಾರು ಪಡೆಯಲೇ ಬೇಕು ಎಂಬ ಆಸೆ ಕಾಣದೆ ಇರಲಾರದ ಮಾನವರು ಇಲ್ಲವೇ ಇಲ್ಲ ಎಂದೇ ಹೇಳಬೇಕು.
ಇದಕ್ಕೆಲ್ಲ ಕಾರಣ ನಮ್ಮ ಮುಂದೆ ಬರುವ ವಿವಿಧ ಕಂಪನಿಗಳ ತರಾವರಿ ಹೊಸ ವಿನ್ಯಾಸದ, ವಿವಿಧ ವಿಭಿನ್ನ , ವಿಶೇಷ ಮಾದರಿಯ, ವಿಶೇಷ ಕಾರ್ಯಗಳಿಗೆ ಕಾರು ಬಳಕೆಯಾಗುತ್ತಿವೆ. ಡೀಸೆಲ್ , ಪೆಟ್ರೋಲ್ ನ ಸಾಂಪ್ರದಾಯಿಕ ಇಂಧನ ಆಧಾರಿತ ಹೊರತು ಪಡಿಸಿ ಸೋಲಾರ್, ಹೊಂಗೆ ಎಣ್ಣೆ , ಬೆನ್ಜೀನ್ ಆಲ್ಕೋಹಾಲ್ ಮತ್ತು ಇತ್ತೀಚೆಗಿನ ಕ್ರಾಂತಿಕಾರಕ ಎಲೆಕ್ಟ್ರಿಕಲ್ ಕಾರುಗಳು ರಸ್ತೆಯ ಮೇಲೆ ತಮ್ಮ ಕಾರು ಬಾರು ನಡೆಸುತ್ತಿವೆ.
ಪ್ರಸ್ತುತ ವಿಶ್ವದೆಲ್ಲೆಡೆ 1.4 ಬಿಲಿಯನ್ ಕಾರುಗಳು ರಸ್ತೆ ಮೇಲಿವೆ ಎಂದು ನಂಬಲಾಗಿದೆ ಇನ್ನು ಇಪ್ಪತ್ತು ವರ್ಷಗಳಲ್ಲಿ 2.8 ಬಿಲಿಯನ್ ಕಾರು ರಸ್ತೆಗಳಿಯುವೆ ಎಂದು ಅಂದಾಜಿಸಲಾಗಿದೆ.
ಏಕೆ ಏರಿಕೆ ಆಗದು ಕಾರು ಕೇವಲ ದೊಡ್ಡ ಸಾಹುಕಾರರ, ಹಣವಂತರ , ಅಧಿಕಾರಿಗಳ ಸೊತ್ತು ಸೊಕ್ಕು ಎಂಬ ಮಾತು ಇಂದು ಇಲ್ಲವಾಗಿದೆ. ಪ್ರತಿ ವ್ಯಕ್ತಿ ತನ್ನ ಯೋಗ್ಯತೆಗೆ ತಕ್ಕಂತೆ ಆಸೆ ಪಟ್ಟು ತನ್ನ ಬಜೆಟ್ ಗೆ ತಕ್ಕಂತೆ ಹಣ ಹೊಂದಿಸಿಕೊಂಡು EMI ಆದರೂ ಸರಿ ಕೊಳ್ಳುವ ಪರಿಪಾಠ ಶುರುವಾಗಿದೆ ಅದಕೆಂದೆ ಕಾರು ಕಂಪನಿ ಸಣ್ಣ ಕರುಗಳನ್ನು ತಯಾರಿಕೆಯಲ್ಲಿ ತೊಡಗಿದರೆ, ಕೊಳ್ಳಲು ಸಾಲ ನೀಡುವ ಬ್ಯಾಂಕುಗಳು ಸಾಲ ನೀಡಲು ತಾ ಮುಂದು, ತಾ ಮುಂದು ಎಂದು ಕಾಯುತ್ತವೆ, ಸಾಲಗಾರರನ್ನೆ ಬೇಡುತ್ತವೆ.
ಇಂದು ನಾವು ಕಾರು ಕಾರು ಎಂದು ಮುಗಿಬೀಳುವ ಕಾರುಗಳ ಹುಟ್ಟಿನ ಇತಿಹಾಸವಂತೂ ಸರಳವಾಗಿರಲಿಲ್ಲ ಹಲವಾರು ಏಳು ಬೀಳುಗಳನ್ನು, ಹಲವಾರು ಅನಾಹುತಗಳನ್ನು ಕಂಡು ಇಂದು ಜನರೇಷನ್ ಗೆ ತಕ್ಕಂತೆ , ಅಗತ್ಯಕ್ಕೆ ಅನುಸಾರ ಕಾರು ತಯಾರಿಕೆಯಾಗುತ್ತವೆ.
ಕಾರುಗಳ ಪರಿಣಾಮ ವಿಶ್ವ ಜಾಗತೀಕ ತಾಪಮಾನದಲ್ಲಿ ಏರಿಕೆಯಾಗಿ ನಿರಂತರವಾಗಿ ಪ್ರಕೃತಿ ಮೇಲೆ ಪರಿಣಾಮ ಬೀರಿ ಕಾಡಿ ಪ್ರವಾಹದಂತಹ ಪರಿಸ್ಥಿತಿ ಎಲ್ಲೆಡೆ ಕಂಡರು ನಾವು ಮಾತ್ರ ಕಾರು ಕೊಳ್ಳುವ ಆಸೆ, ಬಯಕೆ ಎಲ್ಲೂ ಬಿಡುವುದಿಲ್ಲ.
ಇಂತಹ ಕಾರುಗಳ ಜನನ , ಉನ್ನತೀಕರಣ, ವಿನ್ಯಾಸ ,ಕಂಪನಿಗಳ ಇತಿಹಾಸ , ಸೌಲಭ್ಯ , ತಂತ್ರಜ್ಞಾನ ಸಹಿತ ಕಾರು ಮುನ್ನೋಟವನ್ನು ಇಂದಿನಿಂದ ಪ್ರತಿ ಬುಧವಾರದಂದು. ತಪ್ಪದೇ ಓದಿ ಕಾರಿನ "ಕಾರುಬಾರು".
***ಮೋಂ ಪಿ**
*
___________________________________________________________________________________
English Translation...
Cars, cars, cars. Car seen on the road, car in front of office, car in front of house, car in house garage. The car is not with us.
This is because the car is being used by the various companies that come before us for a new design, a variety of different, special models. Other than diesel, petrol, conventional fuel, Pdc Solar, Honge Oil, Benzene Alcohol and the latest revolutionary electric cars are driving their cars on the road
It is currently estimated that 1.4 billion cars are on the road worldwide and it is estimated that 2.8 billion cars will be on the road in the next twenty years.
Why is it that the car is just a big deal, the money and money of the officers and the authorities are missing today. EMI is OK, though, as each person has to fit his budget to suit his budget, so the car company has started making small calves.
Today, we have found a number of seven downs, many disasters that were not as simple as the history of the cars that are going to end up being a car car.
The effect of cars is on the rise in global global warming, which is constantly affecting nature, such as the jungle floods we see everywhere.
Every Wednesday from now on, a car preview of the car's birth, upgrade, design, company history, facility and technology. Don't miss the "car" of the car.
*** Mon P ***


No comments:
Post a Comment