ಮ್ಯಾಗ್ನಿಫಿಸೆಂಟ್ / ಭವ್ಯ ಎಂಬ ಪದಕ್ಕೆ ಒಬ್ಬ ಮಾನವನ ಸಾಧನೆ ಹುಡುಕ ಹೋದರೆ ಅಲ್ಲಿ ಇಲ್ಲಿ ಒಂದೊ ಎರಡೊ ಹೆಸರು ಕೇಳುತ್ತವೆಯಾದರೂ . ಆ ಪದಕ್ಕೆ ನಿಜವಾದ ವಾರಸುದಾರಳೆಂದರೆ ಭಾರತೀಯ ಬಾಕ್ಸಿಂಗ್ ರಿಂಗ್ ನ ಏಕೈಕ ಹೆಸರು ಮೇರಿ ಕೋಮ್ ಅಲ್ಲಲ್ಲ ಮ್ಯಾಗ್ನಿಫಿಸೆಂಟ್ ಮೇರಿ ಕೋಮ್ ಅವರಿಗಾಗಿ ಬಾಕ್ಸಿಂಗ್ ನಲ್ಲಿ ಸೃಷ್ಟಿಯಾದ ಪದವಿದು ಎಂದರೆ ಅವರ ಸಾಧನೆ ಹಾಗೂ ಘನತೆ ಎಷ್ಟರಬಹುದು ಅಲ್ಲವೆ.
ಅಥ್ಲೆಟಿಕ್ಸ್ ನಲ್ಲಿ ಹೆಚ್ಚು ಭಾಗವಹಿಸುತ್ತಿದ್ದ ಮೇರಿಗೆ ಡಿಂಕೊ ಸಿಂಗ್ ಬಾಕ್ಸಿಂಗ್ ಕಪ್ ಹೆಚ್ಚು ಪ್ರಭಾವಗೊಳಿಸಿತು. ಆಕೆ ಅಲ್ಲಿಂದ ತನ್ನ ವೃತ್ತಿಯನ್ನು ಕ್ರೀಡೆಯಾಗಿ ಅದರಲ್ಲು ಬಾಕ್ಸಿಂಗ್ ಅನ್ನೆ ಆಯ್ದುಕೊಂಡರು. ತನ್ನ ಜೀವನದಲ್ಲಿ ಬಾಕ್ಸಿಂಗ್ ಒಂದು ಪ್ರಮುಖ ನಿರ್ಧಾರವೆಂದು ಭಾವಿಸಿ ಕಠಿಣವಾದ ನಿರ್ಧಾರಕ್ಕೆ ಬಂದರು ತನ್ನ ಹುಟ್ಟೂರನ್ನೆ ಓದಿನೊಂದಿಗೆ ತೆಜಿಸಿ ರಾಜ್ಯದ ರಾಜಧಾನಿ ಇಂಪಾಲದಲ್ಲಿದ್ದ ಕ್ರೀಡಾ ಅಕ್ಯಾಡೆಮಿಗೆ ಸೇರಿಕೊಂಡು ಬಾಕ್ಸಿಂಗ್ ನಲ್ಲಿ ತರಬೇತಿ ಪಡೆದಳು ತನ್ನ 15ನೇ ವಯಸ್ಸಿನಲ್ಲಿ.
ತನ್ನ ತಂದೆಯಿಂದ ಪಡೆದ ಬಾಕ್ಸಿಂಗ್ ನ ಸೀಕ್ರೆಟ್ ಟಿಪ್ಸ್ ಗಳನ್ನೆ ಬಳಸಿ 2002ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಕೋಮ್ ಚಿನ್ನ ಗೆದ್ದಿದ್ದರು. ಆಗ ಉಕ್ರೇನ್‌ನ ಹನಾ ಒಖೊಟಾ ಎದುರು ಆದರೆ 2001ರಲ್ಲೆ 48ರ ವಿಭಾಗದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದಿದ್ದರು.
2005,2006 ಮತ್ತು 2008ರಲ್ಲಿ ಮತ್ತೆ ವಿಶ್ವ ಚಾಂಪಿಯನ್ ಆಗಿ ಮೆರೆದರು ಪುಟ್ಬಾಲ್ ಆಟಗಾರ ಕೊರೊಂಗ್ ಆನ್ಕಾಲೇರ್ ರವರನ್ನು ಮದುವೆಯಾಗಿದ್ದ ಕಾರಣ ಎರಡು ಮಕ್ಕಳ ತಾಯಿ ಮತ್ತೆ ಮೇರಿ ಬಾಕ್ಸಿಂಗ್ ರಿಂಗ್ ಪ್ರವೇಶಿಸಿ ಮತ್ತೆ ವಿಶ್ವ ಚಾಂಪಿಯನ್ ಆದರು.
ಎಲ್ಲಾ ಕ್ರೀಡಾಪಟುಗಳಂತೆ ಭಾರತಕ್ಕೆ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಆಸೆಯನ್ನು ಭಾರತಕ್ಕಾಗಿ 2012ರ ಲಂಡನ್ ಒಲಂಪಿಕ್ಸ್ ನಲ್ಲಿ 51 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಬೀಗಿದರು.
ಮೇರಿ 2001ರಲ್ಲಿ ಬೆಳ್ಳಿ ಮತ್ತು 2019ರಲ್ಲಿ ಕಂಚಿನ ಪದಕ ಗಳಿಸಿದ್ದು ಬಿಟ್ಟರೆ ಒಟ್ಟು ಏಳು(2002, 2005,2006,2008,2010,2018,2019) ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಮೇರಿಯ ಸಾಧನೆ ಕೇವಲ ವಿಶ್ವ ಚಾಂಪಿಯನ್ಶಿಪ್ ಗಳಲ್ಲಿ ಮಾತ್ರವಲ್ಲ ಪ್ರತಿ ಆರು ಟೂರ್ನಮೆಂಟ್ ಗಳಲ್ಲಿ ಒಂದನ್ನು ಖಂಡಿತವಾಗಿ ಗೆದ್ದೆ ತೀರುತ್ತಾರೆ. ಅದಕ್ಕೆ ಸಾಕ್ಷಿ ಎಂದರೆ 2005,2010,2012,2017 ರಲ್ಲಿ ಏಷ್ಯನ್ ಮಹಿಳಾ ಚಾಂಪಿಯನ್ಶಿಪ್ ನಲ್ಲಿ ಚಿನ್ನ ಗಳಿಸಿದರೆ 2008ರಲ್ಲಿ ಮಾತ್ರ ಬೆಳ್ಳಿ ಪದಕ ಗಳಿಸಿದ್ದಾರೆ. ಮಹಿಳೆಯರ ವಿಶ್ವ ಕಪ್ ಮತ್ತು ಏಷ್ಯನ್ ಕಪ್ ಗಳಲ್ಲೂ ಸಹ ಚಿನ್ನದ ಬೇಟೆ ಆಡಿದ್ದಾರೆಂದರೆ ಆಕೆ ಒಬ್ಬ ಸ್ಪೂರ್ತಿದಾಯಕ ಮಹಿಳೆಯೇ ಸರಿ.
ಅವರ ಈ ಸಾಧನೆಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿವೆ ಅದರಲ್ಲಿ ಪ್ರಮುಖವಾಗಿ 2003ರಲ್ಲಿ ಅರ್ಜುನ ಪ್ರಶಸ್ತಿ , 2006ರಲ್ಲಿ ಪದ್ಮ ಶ್ರೀ, 2013ರಲ್ಲಿ ಪದ್ಮಭೂಷಣ , 2020 ರಲ್ಲಿ ಪದ್ಮವಿಭೂಷಣ ಸೇರಿದಂತೆ 2009ರಲ್ಲಿ ಕ್ರೀಡಾ ಕ್ಷೇತ್ರದ ಸಾಧನೆಗೆ ರಾಜೀವ್ ಖೇಲ್ ರತ್ನ ಪ್ರಶಸ್ತಿ ಕೂಡ ಗಳಿಸಿದ್ದಾರೆ.
ಅಲ್ಲದೆ 2007ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಕೂಡ ಹೆಸರು ಬರೆಸಿಕೊಂಡರೆ. ಇದೆ ವರ್ಷ ನಡೆಯಬೇಕಿದ್ದ ಒಲಂಪಿಕ್ಸ್ ನ ಅಂತರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟದ ಬಾಕ್ಸಿಂಗ್ ಬ್ರಾಂಡ್ ಅಂಬಾಸಿಡರ್ ಆಗಿ ಕೂಡ ಆಯ್ಕೆಯಾಗಿದ್ದರು ಮತ್ತು ಪ್ರಸ್ತುತ ರಾಜ್ಯಸಭೆ ಸದಸ್ಯೆ ಕೂಡ ಆಗಿದ್ದರೆ ಮೇರಿ ಕೋಮ್ .
ಅವರನ್ನು ಬರೆ ಮೇರಿ ಕೋಮ್ ಎಂದರೆ ಸಾಲದು ಭಾರತಕ್ಕಾಗಿ ಅವರು ಗಳಿಸಿದ ಪದಕಗಳ ಬೆಟ್ಟಕ್ಕೆ ತೂಕ ಬರಬೇಕಾದರವ ಮ್ಯಾಗ್ನಿಫಿಸೆಂಟ್ ಮೇರಿ ಕೋಮ್ ಎಂದರೆ ಮಾತ್ರ ಅವರ ಸಾಧನೆಗೆ ಒಂದು ತೂಕ ಹೌದಲ್ಲವೇ...?
***ಮೋಂ ಪಿ***
___________________________________________________________________________________
English Translation...
The word Magnificent is one or two names out there if one is looking for human achievement. The real successor to the term magnificent is not the only name of the Indian boxing ring, that is Mary Kom. Magnificent is the term created itself in the boxing ring after her achievement and prestige.
Born into a poor farming family in Manipur on 1 March 1983, the father of Mangate Tofon Kom and his mother Mangate Akkom Kom was born in Kom.
As a child, Mary attended several schools and stopped reading to just tenth grade. But she graduated from distance education without giving up. Mary's interest in sports has been around since her school days. Mary's interest in sports was awe-inspiring. She studied at the Imperial Schools in Manipur, participating in almost all sports, including running races, javelin throw, football , and volleyball.
The Dinko Singh Boxing Cup impressed Mary with her participation in athletics. From there she chose her profession as a sport and boxing. At the age of 15, she took up boxing at the sports academy in Impala, the state capital.
Mary Kom won gold at the 2002 World Championships using her boxing secret tips from her father. She then faced Ukraine's Hana Okhota but won the silver medal in 2001 in the 48 division.
The mother of two children entered the boxing ring again and became world champion again as she married footballer Korong Ancalare, who became world champion again in 2005, 2006, and 2008 this was rear achievement from any Indian sportsperson.
Like all athletes, She and India too had the desire to win a medal at the Olympics arena, she came like rain in drought land , and winning the bronze in the 51 kg category at the 2012 London Olympics in India is real pride and proud achievement under try color. her tear witness the medal gain.
Mary won silver in 2001 and a bronze medal in 2019 , and has been crowned world champion seven times (2002, 2005, 2006, 2006, 2008, 2008, 2011).
Mary's performance is not just at the World Championships but she has won every six tournaments from her career. And she is also a gold medalist in the Asian women's championships in 2005, 2010, 2012, 2012 , and 2017 was only silver medals. She's also an inspirational woman, having played gold for the Women's World Cup and the Asian Cup.
Her achievements include several awards, including the Arjuna Award in 2003, the Padma Shri in 2006, the Padma Bhushan in 2013, the Padma Vibhushan in 2020, and for her greatest achievement, she has awarded with India's highest sports award Rajiv Khel Ratna in sports in 2009.
Also, she has named in the Limca Book of Records in 2007. She was also chosen as the Boxing Brand Ambassador of the International Boxing Federation of the Olympics, to be held this year(2020), and is currently a member of the Rajya Sabha.
Writing her bios Mary Kom is a not credit to India. Magnificent Mary Kom is a weight to her achievement.
***moh p***















