Thursday, July 16, 2020

Indian War Army - part 1

  ಭಾರತ ವಿಶ್ವದ ಅತ್ಯದ್ಭುತ ದೇಶಗಳಲ್ಲೊಂದು ವಿಶಾಲ ಪ್ರಾಕೃತಿಕ ಸಂಪತ್ತು, ಸಂವೃದ್ದವಾಗಿ ಹರಿವ ನದಿ, ಅಷ್ಟದಿಕ್ಕುಗಳಲ್ಲಿ ನೆಲೆನಿಂತ ಬೃಹತ್ ನಗರಗಳು, ಬಗೆ ಬಗೆ ಭಾಷೆಗಳನ್ನು ಮಾತಾನಾಡುವ ಜನಗಳು, ಧರ್ಮಗಳು,ದುರ್ಗಮ ಗಡಿ ಭೂ ಭಾಗಗಳು ಭಾರತವನ್ನು ಒಂದು ಪುಟ್ಟ ಉಪಖಂಡವನ್ನಾಗಿಸಿದೆ.
  ನಮ್ಮ ಈ ಅತಿವಿಶಿಷ್ಟ ಉಪಖಂಡಕ್ಕೆ ಅಂಟಿಕೊಂಡ ನೇಪಾಳ, ಶ್ರೀಲಂಕಾ, ಮಾಯಾನ್ಮಾರ್, ಬಾಂಗ್ಲಾದೇಶ , ಅಫ್ಘಾನಿಸ್ತಾನ , ಭೂತಾನ್ ಮತ್ತು ಚೀನಾ ನಮ್ಮ ದೇಶದ ನೆರೆಯ ರಾಷ್ಟ್ರಗಳು. ಕೆಲವು ನಮ್ಮ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆಯಾದರೂ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಗಡಿ ತಂಟೆ ಸಾಮಾನ್ಯವಾದರೆ ಸದಾ ಕೆಣಕುವ ಚೀನಾ ಪಾಕಿಸ್ತಾನಕ್ಕಿಂತಲೂ ಭಾರತಕ್ಕೆ ಬಲು ಅಪಾಯಕಾರಿ.

  ಸ್ವತಂತ್ರ್ಯ ನಂತರ ಒಮ್ಮೆ ಯುದ್ಧ ಮಾಡಿ ಗೆದ್ದು , ಪದೆಪದೆ ಕಾಲು ಕೆರೆದು ಬರುವ ಚೀನಾದ ಉಪಟಳ ಅರುಣಾಚಲ ಪ್ರದೇಶದ ಮೇಲೆ ಇದುವರೆಗೂ ಇತ್ತಾದರು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಭಾರತದಿಂದ ಪ್ರಭಾವಿ ಹುದ್ದೆಗೆ ಡಾ॥ ಹರ್ಷವರ್ದನ್ ಏರಿದ ನಂತರ ಗಡಿ ತಂಟೆ ಹೆಚ್ಚಾಗಿದೆ.

  ಇದೆ ಸ್ಥಾನಕ್ಕೆ ಹಿಂದೆ ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾರವರೂ ಅಲಂಕರಿಸಿದಾಗ ಇಲ್ಲದ ಕ್ಯಾತೆ ಕೊರೊನಾ ಹರಡಿಸುವಿಕೆ ಸಂಬಂದದಿಂದ ಭಾರತ ತನ್ನ ವಿರುದ್ಧ ತನಿಖೆಯಲ್ಲಿ ನಿರ್ಣಯ ಕೈಗೊಳ್ಳದಿರಲೆಂದೆ ಹೊಸ ಗಡಿ ತಂಟೆ ಶುರು ಮಾಡಿದಂತಿದೆ.

  ಲಾಡಕ್ ಸೇರಿದಂತೆ ಕೆಲ ಭಾರತದ ಗಡಿ ಭಾಗಗಳಲ್ಲಿ ತನ್ನ ಸೇನೆಯನ್ನು ನುಗ್ಗಿಸಿ ಲಾಡಕ್ ತನ್ನ ದೇಶದ ಭೂ ಭಾಗವೆಂದು ಪ್ರತಿಪಾದಿಸಿ ಭಾರತೀಯ ಸೈನಿಕರ ಮೇಲೆ ಮಾರಣಾಂತಿಕ ಹಲ್ಲೆ ನಡಿಸಿ 23 ಸೈನಿಕರನ್ನು ಕೊಂದು... ಯುದ್ಧಕ್ಕೆ ಕೆಣಕುತ್ತಿದೆ.

 ವಿಶ್ವದಲ್ಲೆ ಎರಡನೇ ಅತಿಹೆಚ್ಚು ಚೀನಾ ನಂತರ ಸಕ್ರಿಯ ಸೇನೆ ಹೊಂದಿದ ಭಾರತ ತನಗಿಂತ ಹೆಚ್ಚಿನ ಬಲ ಹೊಂದಿದ ಚೀನಾದ 49 ಸೈನಿಕರನ್ನು ಮಸಣ ಸೇರಿಸಿದ್ದಾರೆಂದರೆ ಭಾರತ ಸೈನ್ಯ ಬಲಕ್ಕೆ ಚೀನಾ ಖಂಡಿತವಾಗಿ ಬೆದರೆದೆ ಇರದು ತನ್ನ ಸೇನಿಕರು ಎಣಿಕೆ ಮಾಡಲು ಸಹ ಆಗದಷ್ಟ ಮಂದಿ ಸತ್ತಿದ್ದಾರೆ ಎಂದು ಚೀನಾವೇ ಹೇಳಿದೆ.

  ಈ ಹೇಳಿಕೆಯಷ್ಟೆ ಸಾಕು ಭಾರತ ಸೇನೆಯ ಬಲ ವಿಶ್ವ ಅರಿಯಲು.. ಕಾರಣ ವಿಶ್ವದಲ್ಲೆ ಅತಿಹೆಚ್ಚು ಸಕ್ರೀಯ ಹಾಗೂ ವೃತ್ತಿಪರ ಸೈನ್ಯ ಹೊಂದಿದ ದೇಶ ಭಾರತ ಎಂದರೆ ಇದು ಉತ್ಫ್ರೇಕ್ಷೆಯಲ್ಲ... ಉದಾಹರಣೆಗೆ ಹಿಂದೆ ಭಾರತದ ವಾಯುಗಡಿ ದಾಟಿ ಬಂದಿದ್ದ ಪಾಕಿಸ್ತಾನದ 5 ನೇ ತಲೆಮಾರಿನ ಎಫ್‌–16

 ಯುದ್ಧ ವಿಮಾನಗಳನ್ನು ತನ್ನ ದೇಶದ ಹಳಯ ಮಾದರಿಯ 
ಮಿಗ್‌ -21 ಯುದ್ಧ ವಿಮಾನದ ಮೂಲಕ ವ್ಹಿಂಗ್‌ ಕಮಾಂಡರ್‌ ಅಭಿನಂದನ್‌ ಬೆನ್ನಟ್ಟಿ ಹೋಗಿದ್ದರು. 

  ಈ ಕಾಳಗದಲ್ಲಿ ಅಭಿನಂದನ್‌ ಅವರು ಪಾಕ್‌ನ 5 ನೇ ತಲೆಮಾರಿನ ಎಫ್‌–16 ಯುದ್ಧ ವಿಮಾನವನ್ನೆ ಹೊಡೆದುರುಳಿಸಿದ್ದರು.


ಇನ್ನು ಸರ್ಜಿಕಲ್ ಸ್ಟ್ರೈಕ್ ಮೂಲಕವೂ ಮಾಯನ್ಮಾರ್ ಮತ್ತು ಪಾಕಿಸ್ತಾನಕ್ಕೆ ತನ್ನ ಸೀಮಿತ ಸಂಪನ್ಮೂಲಗಳ ನಡುವೆಯೇ ಭಾರತ ವಿಜಯೀಯಾಗಿದೆ.

  ನಮ್ಮ ಕೆಚ್ಚೆದೆಯ ಭಾರತೀಯ ಸೇನೆ ಪಾಕಿಸ್ತಾನಕಷ್ಟೆ ಅಲ್ಲ ಕುತಂತ್ರಿ ಸೈನ್ಯ ಬಲಿಷ್ಠ ಚೀನಾವನ್ನು ಸಂಭಾವ್ಯ ಯುದ್ಧದಲ್ಲಿ ಅದರ ವಿರುದ್ಧ ಗೆಲ್ಲುವ ಸಾಮರ್ಥ್ಯವಿದೆ. ಇಂತಹ ವಿಜಯದ ರಣ ಹಸಿವು ಹೊಂದಿದ ರಾಷ್ಟ್ರದ ಹೆಮ್ಮೆಯ ಭಾರತೀಯ ಸೇನೆಯ ಸಮಗ್ರ ಹಿನ್ನಲೆ ಮತ್ತು ಮುನ್ನೆಲೆಯನ್ನು, ಸಾಮರ್ಥ್ಯ , ಯುದ್ಧ ಕೌಶಲ್ಯ , ಶಸ್ತ್ರಾಸ್ತ್ರ, ಯುದ್ಧಗಳ ಮಾಹಿತಿಯುಳ್ಳ ಭಾರತೀಯ ರಣ ಸೇನೆ " ಲೇಖನ ಸರಣಿ ಮೂಲಕ ಬರೆಯುತ್ತಿದ್ದೇನೆ ಓದಿ ಖಂಡಿತವಾಗಿ ಅಭಿಪ್ರಾಯಗಳನ್ನು ತಿಳಿಸಿ.

***********💐ಜೈ ಭಾರತ್ 💐**********

  **********💐ಜೈ ಜವಾನ್💐 **********

                                                                                                                                ***ಮೋಂ ಪಿ***

___________________________________________________________________________________

English Translation...

  India is one of the most beautiful countries in the world, with vast natural wealth, a rich flowing river, huge cities in the oceans, people who speak different languages, religions,The fragile borderland has made India a small subcontinent.

  The neighboring countries of our country are Nepal, Sri Lanka, Myanmar, Bangladesh, Afghanistan, Bhutan and China.  While some have good relations with our country, China and Bangladesh, where borders between Bangladesh and Pakistan are common, are always more dangerous than India.

  Once won the war after independence, the ever-shredding Chinese suburb of Arunachal Pradesh has hitherto been honored with the World Health Organization  After the rise of Harshavardhan, the border has increased.

  The new frontier has already begun to prevent India from deciding on its investigation into the Keta Corona dispersal, which was previously unseated by BJP's national president.

  Ladakh, by pushing his army across some of India's borders, including Jaladak, claimed 23 of his soldiers, inflicting deadly attacks on Indian soldiers.

   India, the second-largest active force in the world after China, has put 49 Chinese troops ahead of its own.

   This is not enough to say that India is the most active and professional army in the world.

   Wing Commander Abhinandan was chased by a MiG-21 fighter.

   In this fight, Abhinandan had shot down Pakistan's 5th generation F-16 fighter aircraft.  India is still victorious in Myanmar and Pakistan despite its limited resources through surgical strikes.
  Our brave Indian army is not just Pakistan. Cunning forces have the potential to win a powerful war against China.  A comprehensive background and background of the proud Indian Army of such a triumphant nation, with its strength, combat skills, weapons and war information. I am writing through a series of articles by the Indian Army please encourage my article.

*********** 💐jai Bharat 💐 ********

 ********** 💐jai jawan💐 *************          

***Mon P ***


No comments:

Post a Comment

CarZ part -3

  ಆಂತರಿಕ ದಹನಕಾರಿ ಎಂಜಿನ್ ಬಹುಶಃ ಹೀಗೆಂದರೆ ಅರ್ಥೈಸಿಕೊಳ್ಳಲು ಕಷ್ಟವಾಗಬಹುದು. internal combustion engine ಎಂಬ ಆಂಗ್ಲ ಪದವನ್ನು  ತಾಂತ್ರಿಕವಾಗಿ ಬಳಸಲಾಗುತ್ತ...