Sunday, July 19, 2020

Mother of thousand childrens

ಇಂದಿನ ಜೀವನದಲ್ಲಿ ನಿಮಗೆ ಎಷ್ಟು ಮಕ್ಕಳು ಎಂದು ಕೇಳಿದರೆ ಕಣ್ಣುಗಳಲ್ಲೆ ಕೊಲೆ ಮಾಡಿಬಿಡುವಂತೆ ಗುರಾಯಿಸಿ ಮಕ್ಕಳಾ ನಮಗೆ ಒಂದೆ ಮಗು ಇರೊದು ಎನ್ನುತ್ತಾರೆ ಈಗಿನ ದಂಪತಿಗಳು.

ಆದರೆ ಹಿಂದಿನವರು ಈಗಲೂ ಸಹ ಕನಿಷ್ಟ ಎರಡಾದರೂ ಸರಿ ಇರಬಾರದೆ ಮಕ್ಕಳು ಎನ್ನುವರು, ಕಾರಣ ಕೇಳಬೇಡಿ ಅವರಿಗೆ ಒಂದಲ್ಲ ಎರಡಲ್ಲ ಮನೆ ತುಂಬ ಒಂದು ಡಜನ್ ಮಕ್ಕಳ ಇದ್ದರೆ ಅದು ಅಂದಿನ ಕಾಲಕ್ಕೆ ಕನಿಷ್ಟವಷ್ಟೆ ಅದನ್ನು ಮೀರಿಸಿದವರು ಇದ್ದಾರೆ, ಕೆಲವರು ಹೆತ್ತು ಸಾಕಲಾಗದೆ ಮಾರಿದವರೂ ಉಂಟು ಕಾರಣ ಬಡತನ ಮತ್ತು ಸಾಕಲಾಗದ ಸ್ಥಿತಿ.

ಆದರೆ ಸಾವಿರ ಮಕ್ಕಳು ಇದ್ದರೆ ಹೇಗೆ...? ಹಾ ಎನ್ನಬೇಡಿ ಗಾಂಧಾರಿಗೂ ಕೂಡ 100 ಮಕ್ಕಳಿದ್ದರು. ಅದು ಆ ಕಾಲ ಎನ್ನಬೇಡಿ. ನಮ್ಮ ಮಧ್ಯೆ ಕೂಡ ಅಂತಹ ಮಹಾ ತಾಯಿ ಇದ್ದಾರೆ ಅವರೆ ಸಿಂಧೂ ತಾಯಿ ಸಪ್ಕಾಳ್.



ಹೌದು ಈಕೆಗೆ ಇರುವುದು ಸಾವಿರ ಮಕ್ಕಳು ಗಾಂಧಾರಿ ಕೂಡ ಹೆದರಿಕೆಯಿಂದ ನಡುಗಬಹುದಾದ ಸಂಖ್ಯೆಯೆ. ಆದರೆ ತಾಯಿ ಆಗಬೇಕಾದರೆ ಹೆರಬೇಕೆಂಬ ನಿಯಮವೇನಿಲ್ಲ ತಾಯಿ ಪ್ರೀತಿ ತೋರಿದ ಮಾತೆ ಕೂಡ ತಾಯಿ ಆಗಲು ಸಾಧ್ಯವೆಂದು ತೋರಿದ ಮಹಾಮಾತೆ.

ಮಹಾರಾಷ್ಟ್ರದ ಹಳ್ಳಿ ಯೊಂದರಲ್ಲಿ ಕಡು ಬಡತನದಲ್ಲಿ ಹುಟ್ಟಿದ ಸಿಂಧೂಗೆ ೯ರ ಸಣ್ಣ ವಯಸ್ಸಿನಲ್ಲೇ ಮದುವೆ ಮಾಡಿದರು ಅದು ೩೦ ವರ್ಷದವನೊಂದಿಗೆ. ಆತನೂ ಕೂಡ ಕೂಲಿ ಕಾರ್ಮಿಕ, ಆಕೆಯೂ ಅವನೊಂದಿಗೆ ಕೂಲಿಯಲ್ಲಿ ಸಹಾಯ ಮಾಡುತ್ತಾ ತನ್ನ ೧೯ ನೇ ವಯಸ್ಸಿಗೆ ೪ ಮಕ್ಕಳನ್ನು ಹೆತ್ತಿದ್ದಳು.

ಆದರೆ ಬಡತನದ ಸುಖಿ ಕುಟುಂಬ ಒಬ್ಬ ದೂರ್ತನಿಂದ ಸಂಪೂರ್ಣ ನಿರ್ನಾಮವಾಯಿತು. ಕೂಲಿಯ ಮಾಲಿಕ ಆಕೆಯೊಂದಿಗೆ ಹಳ್ಳಿಯ ಇತರೆ ಹೆಣ್ಣ ಮಕ್ಕಳೊಂದಿಗೆ ಮಾಡುತ್ತಿದ್ದ ಕೆಟ್ಟ ವರ್ತನೆ ಮತ್ತು ಶೋಷಣೆ ಹಾಗೂ ಕಡಿಮೆ ಕೂಲಿಯ ವಿರುದ್ಧವೇ ಸಿಡಿದೆದ್ದು ಅಧಿಕಾರಿಗಳಿಗೆ ತಿಳಿಸಿದಳು ಒಂಟಿಯಾಗಿ. ಆ ರಾಕ್ಷಸನ ಪೋಲಿಸರು ಬೆಂಡೆತ್ತಿ ಕರೆದೊಯ್ಯುದರು.

ಹೊರ ಬಂದವನೆ ಆಕೆ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಹೊಂಚು ಹಾಕಿ ಸಿಂಧೂಳ ಗಂಡನಿಗೆ ಕುಡಿಸಿ ಆಕೆಗೆ ಹಲವರೊಂದಿಗೆ ಸಂಬಂಧವಿದೆ ಮತ್ತು ತನ್ನೊಂದಿಗೆ ಕೂಡ . ಈ ನಿನ್ನ ಹೆಂಡತಿ ಗರ್ಭದಲ್ಲಿ ಬೆಳಯುತ್ತಿರುವ ಮಗು ಕೂಡ ತನ್ನದೆ ಉಡುಗೊರೆ ಎಂದು ಕಿವಿ ಊದಿದ. ಅದನ್ನು ನಂಬಿದ ಆಕೆಯ ಗಂಡು ಆಕೆ ಗರ್ಭವತಿ ಎಂದು ಕೂಡ ಎಣಿಸಿದೆ ಆಕೆ ಹೊಡೆದು, ಹೊಟ್ಟೆಗೇ ಒದ್ದು ಆಕೆಯನ್ನು ಕೊಟ್ಟಿಗೆ ತಳ್ಳಿದ ಆತ ಮಾತು ನಂಬಿ.

ಹೊಟ್ಟೆಗೆ ಪೆಟ್ಟು ತಿಂದ ಸಿಂಧೂ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಆದರೆ ತನ್ನ ಶೀಲದ ಶಂಕೆಗೆ ಮನ ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಇರಾದೆ ಇಂದ ತನ್ನ ಆಗ ತಾನೆ ಹುಟ್ಟಿದ ಕಂದನ ಹಿಡಿದು ರೈಲು ಕಂಬಿ ಮೇಲೆ ಮಲಗಿದಳು ಸಿಂಧೂ.

ಆದರೆ ಹತ್ತಿರದಲ್ಲೆ ಅಳುವ ಸದ್ದು... ದೆವ್ವವೇ ಎಂದು ಹೆದರಿದರು ಮೊದಲಿಗೆ, ಮೆಲ್ಲನೆ ಎದ್ದು ಧೈರ್ಯ ಮಾಡಿ ನೋಡಿದಳು ರೈಲು ಕಂಬಿಯ ಪಕ್ಕದಲ್ಲಿ ಹಣ್ಣು ಹಣ್ಣು ಮುದಿ ಜೀವ ಒಂದು ಹಸಿವಿನಿಂದ ಅಳುತ್ತಿದ್ದನ್ನು ಕಂಡು ಮರುಗಿ... ಹತ್ತಿರವಿದ್ದ ಸ್ಮಶಾನದಕ್ಕೆ ಹೊಕ್ಕಿ ಸಮಾಧಿ ಮೇಲಿದ್ದ ಗೋಧಿಯನ್ನು ತಂದು ಬೇಯಿಸಿ ತಿನ್ನಿಸಿ ಹಸಿವು ನೀಗಿದಳು.

ಆ ಒಂದು ಸನ್ನಿವೇಶ ಆಕೆ ಕಣ್ಣು ತೆರೆಸಿತು ಬದುಕು ಅಂತ್ಯಕ್ಕಲ್ಲ ಬದುಕು ಬಾಳಲು ಎಂದು ನಿರ್ಧಾರಿಸಿ ಅಂದಿನಿಂದ ಅನಾಥವಾಗಿದ್ದ ಮಕ್ಕಳನ್ನು ಕೂಡಿಕೊಂಡು ಭಿಕ್ಷಾಟನೆ ಮಾಡಿ ಆ ಮಕ್ಕಳನ್ನು ಸಾಕಿದಳು.
ಆಕೆಯ ಮಕ್ಕಳ ಸಂಖ್ಯೆ ಕೂಡ ದಿನೇದಿನೆ ಏರುತ್ತಲೇ ಇತ್ತು. ಅದನ್ನು ಕಂಡ ಕೆಲವರು ಆಕೆಗೆ ಒಂದು ಅನಾಥಾಲಯ ನಿರ್ಮಿಸಿ ಕೊಟ್ಟರು ಜೊತೆ ದೇಣಿಗೆ ಕೂಡ. 
ದಿನ ಕಳೆದಂತೆ ದೇಣಿ ಕೂಡ ಏರುತ್ತಾ ಸಾಗಿತ್ತು ಜೊತೆಗೆ ಮಕ್ಕಳ ಸಂಖ್ಯೆ ಎಣಿದರೆ ಆ ಮಕ್ಕಳ ಸಂಖ್ಯೆ 1500 ಮೀರಿತ್ತು. 

ಆದರೆ ಆ ತಾಯಿ ಮಕ್ಕಳನ್ನು ಸಾಕುವುದನ್ನು ನಿಲ್ಲಿಸಲಿಲ್ಲ ಜೊತೆಗೆ ಆಕೆ ಶೀಲ ಶಂಕಿಸಿ ಒದ್ದು ಕಳಿಸಿದ್ದ ಗಂಡ ಕೂಡ ಆಕೆ ಆಶ್ರಯ ಅರಸಿ ಬಂದ ಆತನನ್ನು ತಳ್ಳಲಿಲ್ಲ ಆದರೆ ಆಕೆ ಗಂಡನನ್ನು ಕೂಡ ಮಮತೆ ನೀಡಿದಳು ಗಂಡನಂತೆ ಅಲ್ಲ ಅವನನ್ನು ಕೂಡ ಅನಾಥಾಲಯದ ಮಗುವಿನಂತೆ.

ಸಿಂಧೂ ತಾಯಿ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ ಅಂದಿನಿಂದ ತನ್ನ ಗಂಡನಿಗೂ ತಾಯಿಯಾದಳು. ಆವತ್ತಿನಿಂದ ಆಕೆಯ ಹೆಸರು ಸಿಂಧೂ ತಾಯಿ ಆಗಿತು. ಬಸವ ರಾಷ್ಟ್ರೀಯ ಪುರಸ್ಕಾರಗಳೊಂದಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದರು ಸಾವಿರ ಮಕ್ಕಳೆ ಆಕೆಯ ಲೋಕ.

ಸ್ಫರ್ತಿ ಎಂದರೆ ಎಲ್ಲರೂ ತಾಯಿಯೇ... ಸಾವಿರಾರು, ನೂರಾರು ಮೊಮ್ಮಕ್ಕಳಿಗೂ ಮಮತೆ ನೀಡಿ, ಬದುಕುವ ದಾರಿ ತೋರಿದ ಮಹಾ ತಾಯಿ ಸ್ಪೂರ್ತಿಯ ಸಿಂಧೂ ತಾಯಿ ಸಪ್ಕಾಳ್. ಹೆಮ್ಮೆ ಇರಲಿ ಮಹಾ ತಾಯಿಯ ಮೇಲೆ.



***ಮೋಂ ಪಿ***

___________________________________________________________________________________

English Translation...



If you ask how many children you have in today's life, you can kill them in the eyes.

But the former are still children at least not at all but don't ask. They don't have one.

But how about a thousand children ...? Ha 1000 children is it true... why not in Mahabharat Gandhari had 100 children too. Don't do it. Even among us, there is such a great mother that is the mother of a thousand children.


Yes, this is the number of thousands of children that even Gandhari could tremble. But there is no rule that one has to be a mother.

Born in a poverty-stricken village in Maharashtra, Sindhu was married at the tender age of 9, to a 32year old man. He was also a laborer, helping her with labor and raising her 2 children by age.

But the poverty-stricken family was utterly exterminated by one Durga. She told the authorities that the mercenary owner had been abusing her with the other girls in the village and was being exploited and the wages were low. The troopers were stalked and taken away.

The outsider ambushes that she should take revenge on her, and she has a relationship with many people, including herself. This is the gift of your wife, even a child shining in her womb. Believing it, her male counts that she was also pregnant. She was beaten, kicked in the stomach, and thrust into the crib.

Sindhu gave birth to a baby girl in the stomach but she had to commit suicide in her bag.

But the sound of weeping nearby ... Fearing that it was the devil, at first she slowly got up and saw a fruit crying with a hunger next to the train pole ...

She opened her eyes to a situation where she was determined to live life to the fullest.

 The number of her children kept increasing day by day. Some who saw it built her asylum and donated it.

 As the day passes, the number of donors has risen and the number of children has risen to over 1,500.

But the mother did not stop raising children, and even her husband, whom she had abused, kicked him out of the shelter, but she also endorsed her husband.

The Indus mother became not only a child but a mother to her husband ever since. Since then her name has been Indus's mother. Several award honors have come up with the National Award for Basava.

The inspiration is the mother of all ... The great mother who gave birth to thousands and hundreds of grandchildren and made a living is the Indus mother of inspiration mother of orphan's SindhuTai Sapkal . Be proud of her.




*** Moh P ***








*** Moh P ***





No comments:

Post a Comment

CarZ part -3

  ಆಂತರಿಕ ದಹನಕಾರಿ ಎಂಜಿನ್ ಬಹುಶಃ ಹೀಗೆಂದರೆ ಅರ್ಥೈಸಿಕೊಳ್ಳಲು ಕಷ್ಟವಾಗಬಹುದು. internal combustion engine ಎಂಬ ಆಂಗ್ಲ ಪದವನ್ನು  ತಾಂತ್ರಿಕವಾಗಿ ಬಳಸಲಾಗುತ್ತ...